Select Your Language

Notifications

webdunia
webdunia
webdunia
webdunia

ಸಂಸತ್ ನಲ್ಲಿ ಪ್ರಧಾನಿ ಮೇಲೆ ವಿಪಕ್ಷಗಳಿಂದ ದಾಳಿಗೆ ಪ್ಲ್ಯಾನ್: ಎಲ್ಲಿಗೆ ತಲುಪಿದ್ದೇವೆ ನಾವು ಎಂಬ ಪಬ್ಲಿಕ್

Modi in Parliament
Photo Credit: X
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮೇಲೆ ದೈಹಿಕ ದಾಳಿಗೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ದಾಳಿಗೆ ಪ್ಲ್ಯಾನ್ ಮಾಡಿದ್ದರು ಎಂದು ಸ್ವತಃ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ನೀಡಿದ್ದರು. ಇದು ನಿಜಕ್ಕೂ ಶಾಕಿಂಗ್ ಸುದ್ದಿ ಎಂದಿರುವ ಪಬ್ಲಿಕ್ ನಾವು ಎಲ್ಲಿಗೆ ತಲುಪಿದ್ದೇವೆ ಎಂದಿದ್ದಾರೆ.

ಸ್ಪೀಕರ್ ಸ್ಥಾನದಲ್ಲಿರುವ ವ್ಯಕ್ತಿ ನಿಷ್ಪಕ್ಷಪಾತಿಯಾಗಿರುತ್ತಾರೆ. ಹೀಗಾಗಿ ಅವರ ಹೇಳಿಕೆಗಳಿಗೆ ಅಷ್ಟೇ ಬೆಲೆಯಿದೆ. ಈ ಕಾರಣಕ್ಕಾಗಿಯೇ ನಿನ್ನೆ ಸ್ವತಃ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳ ದಾಳಿ ಯೋಜನೆ ಬಗ್ಗೆ ನೀಡಿರುವ ಹೇಳಿಕೆ ನಿಜಕ್ಕೂ ಶಾಕಿಂಗ್ ಆಗಿದೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಾಗ ಪ್ರಧಾನಿ ಮೋದಿ ಮಾತನಾಡಬೇಕಿತ್ತು. ಆದರೆ ಮೋದಿ ಎರಡೂ ದಿನವೂ ಲೋಕಸಭೆಗೆ ಬಂದಿರಲಿಲ್ಲ. ಅವರ ವಿಪಕ್ಷಗಳ ಗದ್ದಲದ ನಡುವೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಮೋದಿ ಭಯಗೊಂಡು ಲೋಕಸಭೆಯಲ್ಲಿ ಭಾಷಣ ಮಾಡಿಲ್ಲ ಎಂದು ವಿಪಕ್ಷಗಳು ಆರೋಪಿಸಿತ್ತು.

ಆದರೆ ಈ ನಡುವೆ ಸ್ಪೀಕರ್ ಓಂ ಬಿರ್ಲಾ ‘ಕಾಂಗ್ರೆಸ್ ನ ಕೆಲವು ಸದಸ್ಯರು ಪ್ರಧಾನಿ ಮೋದಿ ಸೀಟ್ ಬಳಿ ಬಂದು ದಾಳಿ ಮಾಡಲು ಯೋಜನೆ ರೂಪಿಸಿದ್ದರು ಎಂಬ ವಿಚಾರ ನನಗೆ ತಿಳಿದುಬಂತು. ಆ ಕಾರಣಕ್ಕೇ ನಾನೇ ಮೋದಿಗೆ ಲೋಕಸಭೆಗೆ ಬರಬೇಡಿ ಎಂದಿದ್ದೆ’ ಎಂದು ಹೇಳಿಕೆ ನೀಡಿದ್ದರು.

ಅವರ ಹೇಳಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಶಾಕ್ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ಎಲ್ಲಿಗೆ ಬಂದು ಮುಟ್ಟಿದೆ? ಸಂಸತ್ ನಲ್ಲಿ ಪ್ರಧಾನಿ ಮೇಲೆ ದಾಳಿಗೆ ಪ್ಲ್ಯಾನ್ ಮಾಡುತ್ತಾರಾ? ಇದು ನಿಜಕ್ಕೂ ಕಳವಳಕಾರಿ. ಇಂತಹ ವಿಚಾರಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್ ಇದನ್ನು ವಿರೋಧಿಸಿದ್ದು ಪ್ರಧಾನಿಯನ್ನು ರಕ್ಷಿಸಲು ಸ್ಪೀಕರ್ ಸುಳ್ಳು ಹೇಳುತ್ತಿದ್ದಾರೆ ಎಂದಿದೆ. ಕಾಂಗ್ರೆಸ್ ಮೇಲೆ ಯಾವ ಆಧಾರದಲ್ಲಿ ಇಂತಹ ಆರೋಪವನ್ನು ಮಾಡುತ್ತಿದ್ದೀರಿ, ಇದು ನಿಜಕ್ಕೂ ನಾಚಿಕೆಗೇಡು ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದಿನ ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ