Select Your Language

Notifications

webdunia
webdunia
webdunia
webdunia

ಅಮೆರಿಕಾ ಜೊತೆಗಿನ ಒಪ್ಪಂದದಿಂದ ಭಾರತದ ರೈತರಿಗೆ ಹೊಡೆತವೇ: ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮಹತ್ವದ ಹೇಳಿಕೆ

Piyush Goyal
Photo Credit: X
ನವದೆಹಲಿ: ಭಾರತ ಮತ್ತು ಅಮೆರಿಕಾ ನಡುವಿನ ವಾಣಿಜ್ಯ ಒಪ್ಪಂದದಿಂದಾಗಿ ಭಾರತದ ರೈತರು, ಮಾರುಕಟ್ಟೆಗೆ ಕುತ್ತು ಎಂದು ಕಾಂಗ್ರೆಸ್ ಆರೋಪಕ್ಕೆ ಇಂದು ಸಂಸತ್ ನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.

ಭಾರತ ಮತ್ತು ಅಮೆರಿಕಾ ನಡುವೆ ಮಹತ್ವದ ವಾಣಿಜ್ಯ ಒಪ್ಪಂದವಾಗಿದೆ. ಇದರಿಂದಾಗಿ ಅಮೆರಿಕಾದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಹೀಗಾದಲ್ಲಿ ಭಾರತದ ರೈತರ ಉತ್ಪನ್ನಗಳು ಬೇಡಿಕೆ ಕಳೆದುಕೊಳ್ಳಲಿವೆ. ಅಮೆರಿಕಾ ಜೊತೆ ಒಪ್ಪಂದ ಮಾಡಿಕೊಂಡು ಮೋದಿ ದೇಶವನ್ನೇ ಮಾರಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಸಂಸತ್ ನಲ್ಲಿ ಭಾರತ-ಅಮೆರಿಕಾ ಒಪ್ಪಂದದ ಬಗೆಗಿನ ಎಲ್ಲಾ ಅನುಮಾನಗಳಿಗೆ ಪಿಯೂಷ್ ಗೋಯಲ್ ಉತ್ತರ ನೀಡಿದ್ದಾರೆ. ಅಮೆರಿಕಾ ನಮ್ಮ ಮೇಲೆ ವಿಧಿಸಿದ್ದ 50% ಸುಂಕವನ್ನು ಶೇ.18 ಕ್ಕೆ ಇಳಿಕೆ ಮಾಡಿದೆ. ಇದರಿಂದ ನಮ್ಮ ವೀಕ್ಷಿತ್ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಉತ್ಪನ್ನಗಳನ್ನು ಉತ್ತೇಜಿಸಲು ಸಹಾಯವಾಗಲಿದೆ.

ಈ ಒಪ್ಪಂದದಲ್ಲಿ ಸೂಕ್ಷ್ಮ ಕ್ಷೇತ್ರಗಳಾದ ಕೃಷಿ ಮತ್ತು ಡೈರಿಯನ್ನು ರಕ್ಷಿಸಲಾಗಿದೆ. ಎರಡೂ ದೇಶಗಳೂ ಈ ಒಪ್ಪಂದದಲ್ಲಿ ತಮ್ಮ ಸೂಕ್ಷ್ಮ ಕ್ಷೇತ್ರಗಳನ್ನು ರಕ್ಷಿಸಲು ಬಯಸಿವೆ. ಈ ಒಪ್ಪಂದದ ಬಗ್ಗೆ ಕಳೆದ ಒಂದು ವರ್ಷದಿಂದ ನಾವು ವಿಸ್ತೃತ ಚರ್ಚೆ ನಡೆಸಿದ್ದು, ಇದೀಗ ಅಂತಿಮ ರೂಪಕ್ಕೆ ಬರಲಾಗಿದೆ.

pic.twitter.com/1WkduEWEgw

 

— Piyush Goyal (@PiyushGoyal) February 4, 2026

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ