Daily Horoscope

Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರವನ್ನು ಸೋಲಿಸಲು ವಿಪಕ್ಷಗಳು ಮಾಡಿದ್ದ ಮಾಸ್ಟರ್ ಪ್ಲ್ಯಾನ್ ರಿವೀಲ್

Rahul Gandhi
ನವದೆಹಲಿ: ಮಹಿಳಾ ಮೀಸಲು ಮಸೂದೆ ವಿಫಲಗೊಳಿಸಲು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಾಡಿದ್ದ ಮಾಸ್ಟರ್ ಪ್ಲ್ಯಾನ್ ರಿವೀಲ್ ಆಗಿದೆ.

ಲೋಕಸಭೆಯಲ್ಲಿ ಮೊನ್ನೆ ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿಪಕ್ಷಗಳು ಒಗ್ಗಟ್ಟಾಗಿ ಸೋಲಿಸಿತ್ತು. ಇದು ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಗೆ ಯೋಜನೆ ಹಾಕಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯುಂಟು ಮಾಡಿತ್ತು.

ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡುತ್ತಿದೆ ಎಂದು ತಿಳಿದ ತಕ್ಷಣವೇ ವಿಪಕ್ಷಗಳು ಮಸೂದೆ ಸೋಲಿಸುವುದಾಗಿ ಘೋಷಿಸಿದ್ದವು. ಕಾಂಗ್ರೆಸ್, ಡಿಎಂಕೆ ಮೊದಲಾದ ಪ್ರಮುಖ ಪಕ್ಷಗಳು ಮಸೂದೆ ವಿರುದ್ಧವಾಗಿ ನಿಂತಿದ್ದವು. ಕೊನೆಗೂ ಲೋಕಸಭೆಯಲ್ಲಿ ಮಸೂದೆ ವಿಫಲವಾಗಿತ್ತು.

ಆದರೆ ಇದಕ್ಕಾಗಿ ಕೇವಲ ಹೇಳಿಕೆ ಮಾತ್ರವಲ್ಲ, ವಿಪಕ್ಷಗಳು ಒಗ್ಗಟ್ಟಾಗಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿತ್ತು. ಮಸೂದೆ ಮಂಡನೆಗೆ ಮೊದಲು ವ್ಯಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿ ಯಾರೂ ಯಾವುದೇ ಆಮಿಷಕ್ಕೆ ಒಳಗಾಗದಂತೆ, ಸಂಸದರ ಹಾಜರಾತಿ ಬಗ್ಗೆ ನಿಗಾ ವಹಿಸಿತ್ತು. ಈ ಮೂಲಕ ಯಾವುದೇ ತಿದ್ದುಪಡಿಗೆ ಬ್ರೇಕ್ ಹಾಕಲು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ: ಪ್ರತೀಕಾರಕ್ಕೆ ಸಜ್ಜಾದ ಇರಾನ್