Select Your Language

Notifications

webdunia
webdunia
webdunia
webdunia

ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ: ಪ್ರತೀಕಾರಕ್ಕೆ ಸಜ್ಜಾದ ಇರಾನ್

Strait of Hormuz
ಟೆಹ್ರಾನ್: ಒಂದೆಡೆ ಶಾಂತಿ ಮಾತುಕತೆ ಪ್ರಯತ್ನಗಳು ನಡೆಯುತ್ತಿದ್ದರೆ ಇತ್ತ ಇರಾನ್ ಹಡಗನ್ನು ಅಮೆರಿಕಾ ವಶಕ್ಕೆ ಪಡೆದುಕೊಂಡಿದ್ದು ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.
 

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡುಗಿನ ಮೇಲೆ ದಾಳಿ ನಡೆಸಿದ ಅಮೆರಿಕಾ ವಶಕ್ಕೆ ಪಡೆದುಕೊಂಡಿದೆ. ಉಭಯ ದೇಶಗಳ ನಡುವೆ ಯುದ್ಧ ಆರಂಭವಾದ ಬಳಿಕ ಹೊರ್ಮುಜ್ ಜಲಸಂಧಿಯನ್ನು ಇರಾನ್ ಹಡಗನ್ನು ಅಮೆರಿಕಾ ವಶಕ್ಕೆ ಪಡೆದಿರುವುದು ಇದೇ ಮೊದಲ ಬಾರಿಯಾಗಿದೆ.

ಒಂದೆಡೆ ಶಾಂತಿ-ಸಂಧಾನ ಮಾತುಕತೆ, ಕದನ ವಿರಾಮ ಮಾತನಾಡುತ್ತಿರುವಾಗಲೇ ಇನ್ನೊಂದೆಡೆ ತನ್ನ ಹಡಗನ್ನು ಅಮೆರಿಕಾ ವಶಕ್ಕೆ ಪಡೆದಿರುವುದು ಇರಾನ್ ಸಿಟ್ಟಿಗೆ ಕಾರಣವಾಗಿದೆ. ಇದಕ್ಕೆ ತಕ್ಕ ಪ್ರತೀಕಾರ ತೀರಿಸುವುದಾಗಿ ಎಚ್ಚರಿಕೆ ನೀಡಿದೆ.

ಇನ್ನೊಂದೆಡೆ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಮುಂದೆ ತನ್ನ ಆಕ್ರೋಶ ಹೊರಹಾಕಿದೆ. ಶಾಂತಿ ಮಾತುಕತೆಯ ನಡುವೆಯೇ ಇಂತಹ ನಡೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದೀಗ ಇರಾನ್ ಯಾವ ರೀತಿ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

  

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಸ್ಟಂಟ್ ಮಾಡಲು ಹೋಗಿ ನೋಡ ನೋಡುತ್ತಲೇ ಪ್ರಾಣ ಕಳೆದುಕೊಂಡ ಮೂವರು ಯುವಕರು Video