Select Your Language

Notifications

webdunia
webdunia
webdunia
webdunia

ಕ್ಷೇತ್ರ ವಿಂಗಡನೆಯಾದರೆ ಕರ್ನಾಟಕದ ಲೋಕಸಭೆ ಕ್ಷೇತ್ರಗಳು ಎಷ್ಟಾಗಲಿವೆ ಇಲ್ಲಿದೆ ವಿವರ

Parliament
ಬೆಂಗಳೂರು: ಕೇಂದ್ರ ಸರ್ಕಾರವು ಲೋಕಸಭೆ ಕ್ಷೇತ್ರಗಳ ಮರು ವಿಂಗಡನೆ ಮಾಡುವ ಹೊಸ ಮಸೂದೆ ಜಾರಿ ಮಾಡಲು ಮುಂದಾಗಿದೆ. ಇದು ಜಾರಿಯಾದರೆ ಕರ್ನಾಟಕಕ್ಕೆ ಎಷ್ಟು ಲೋಕಸಭೆ ಕ್ಷೇತ್ರಗಳು ಸಿಗಲಿವೆ ನೋಡಿ.

ಲೋಕಸಭೆ ಕ್ಷೇತ್ರ ಈಗ 540 ಇದ್ದು ಹೊಸ ಮಸೂದೆ ಜಾರಿ ಮಾಡುವ ಮೂಲಕ ಇದನ್ನು 850 ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆ ಸಂಸತ್ ನಲ್ಲಿ ಪ್ರಸ್ತಾಪನೆಯಾಗಲಿದ್ದು  ಬಿಲ್ ಪಾಸಾದ ಬಳಿಕ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಲಿದೆ.

webdunia
Photo Credit: AI Image
ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಹಂಚಿಕೆಯನ್ನು ಶೇ.50 ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2011 ರ ಜನಗಣತಿಯನ್ನು ಆಧರಿಸಿ ಮರುವಿಂಗಡಣೆ ಮಾಡಲಾಗುತ್ತದೆ ಎನ್ನಲಾಗಿದೆ. ಹೀಗಾದಲ್ಲಿ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಶೇ. 50 ರಷ್ಟು ಹೆಚ್ಚಾಗಲಿದೆ.

ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಶೇ.50 ರಷ್ಟು ಹೆಚ್ಚಳ ಮಾಡುವ ತೀರ್ಮಾನದಂತೆ ಹೆಚ್ಚಳವಾದರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ 36 ಅಥವಾ 42 ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮರು ವಿಂಗಡಣೆಯಿಂದ ಈಗ ಜನರಲ್ ಕ್ಷೇತ್ರವಾಗಿದ್ದ ಕೆಲವೊಂದು ಸ್ಥಾನಗಳು ಪರಿಶಿಷ್ಟ ಜಾತಿ, ಪಂಗಡದ ವಿಭಾಗಕ್ಕೆ ಬರಲಿವೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆ ಜನರಲ್ ಸೀಟ್ ಆಗಿತ್ತು. ಆದರೆ ಇನ್ನೀಗ ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರವಾಗಬಹುದು. ಯಾವೆಲ್ಲಾ ಹೊಸ ಕ್ಷೇತ್ರಗಳು ಸೇರ್ಪಡೆಯಾಗಲಿವೆ ಎನ್ನುವುದು ಮಸೂದೆ ಮಂಡಿಸಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ