ಏಕ ಭಾರತ ಏಕ ಚುನಾವಣೆ: ನರೇಂದ್ರ ಮೋದಿ ಐಡಿಯಾಕ್ಕೆ ರಾಷ್ಟ್ರಪತಿ ವೋಟ್
ನವದೆಹಲಿ , ಮಂಗಳವಾರ, 6 ಸೆಪ್ಟಂಬರ್ 2016 (12:32 IST)
ಸರ್ಕಾರಿ ಶಾಲೆಯೊಂದರಲ್ಲಿ ಮೇಸ್ಟರು ವಿಶೇಷ ತರಗತಿಯೊಂದನ್ನು ತೆಗೆದುಕೊಳ್ಳುವಾಗ ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಾಕಿದ ಐಡಿಯಾಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಮೇಸ್ಟರು ಬೇರಾರೂ ಅಲ್ಲ, ಸ್ವತಃ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಕ್ಕಳಿಗೆ ಪಾಠ ಮಾಡುತ್ತಾ, ಮೋದಿ ಐಡಿಯಾಕ್ಕೆ ಸಹಮತ ವ್ಯಕ್ತಪಡಿಸಿದರು.
ನನ್ನನ್ನು ಪ್ರಣವ್ ಸರ್ ಅಥವಾ ಮುಖರ್ಜಿ ಸರ್ ಎಂದು ಕರೆಯಿರಿ ಎಂದು 80 ವರ್ಷದ ಪ್ರಣವ್ ಸರ್ 60 ವಿದ್ಯಾರ್ಥಿಗಳ ತರಗತಿಗೆ ಪ್ರವೇಶಿಸುತ್ತಿದ್ದಂತೆ ಹೇಳಿದರು. ಪ್ರಣಬ್ ಸರ್ ತರಗತಿಯು ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನದ ಕೊಡುಗೆಯಾಗಿದೆ. ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರಣವ್ ಹಂಚಿಕೊಂಡರು. ಈ ಅಭಿಪ್ರಾಯಗಳಲ್ಲಿ ಎಲ್ಲಾ ಚುನಾವಣೆಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಕೂಡ ಸೇರಿದೆ.
ಒಂದೇ ಬಾರಿ ಎಲ್ಲಾ ಚುನಾವಣೆಗಳನ್ನು ನಡೆಸುವುದು ಕಾರ್ಯಸಾಧ್ಯವೇ ಎಂದು 11 ತರಗತಿ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದಾಗ, ಚುನಾವಣೆಗಳನ್ನು ಒಂದೇ ಬಾರಿ ನಡೆಸುವ ಕುರಿತು ಚುನಾವಣೆ ಆಯೋಗ ಕೂಡ ಸಹಮತ ವ್ಯಕ್ತಪಡಿಸಿದ್ದು, ಅದು ಅತ್ಯಂತ ಅನುಕೂಲಕರ ಎಂದು ರಾಷ್ಟ್ರಪತಿ ಉತ್ತರಿಸಿದರು.
ತನ್ನ ಪ್ರಶ್ನೆಗೆ ರಾಷ್ಟ್ರಪತಿ ಅತ್ಯಂತ ನಮ್ರತೆಯಿಂದ ಉತ್ತರಿಸಿದ್ದನ್ನು ತಾನು ನಂಬಲಾಗುತ್ತಿಲ್ಲ ಎಂದು ರಾಗಿಣಿ ತಿಳಿಸಿದಳು.
ಭಯೋತ್ಪಾದನೆ ಕುರಿತು ಪ್ರಬಲ ಸಂದೇಶವನ್ನು ಮುಖರ್ಜಿ ನೀಡಿದರು. ನಾವು ಗಡಿಯಾಚೆ ಭಯೋತ್ಪಾದನೆಯ ದಾಳಿ ಎದುರಿಸುತ್ತಿದ್ದೇವೆ. ಇಂದು ಜಗತ್ತಿನ ಅತ್ಯಂತ ದೊಡ್ಡ ಪಿಡುಗು ಆಂತರಿಕವಾಗಿ ಬೆಳೆದ ಭಯೋತ್ಪಾದನೆ ಭಾರತದಲ್ಲಿ ಇನ್ನೂ ಕಾಲಿರಿಸದೇ ಇರುವುದಕ್ಕೆ ನಮ್ಮ ಆಡಳಿತದ ಯಶಸ್ಸು ಕಾರಣವಾಗಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಸುಮಾರು ಒಂದು ಗಂಟೆ ಕಾಲ ನಡೆದ ಉಪನ್ಯಾಸದಲ್ಲಿ ರಾಷ್ಟ್ರಪತಿ ಜಾತ್ಯತೀತತೆಗೆ ಒತ್ತು ನೀಡಿದರು. ಜಾತ್ಯತೀತತೆ ನಮ್ಮ ಜೀವನದ ಭಾಗವಾಗಿದ್ದು, ಈಗಲೂ ಬಿಚ್ಚಿಕೊಳ್ಳುತ್ತಿದೆ ಎಂದರು.
ಮುಂದಿನ ಸುದ್ದಿ