Select Your Language

Notifications

webdunia
webdunia
webdunia
webdunia

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ ಎಬಿಡಿ ಆತ್ಮಕಥೆ

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ ಎಬಿಡಿ ಆತ್ಮಕಥೆ
ನವದೆಹಲಿ , ಶನಿವಾರ, 3 ಸೆಪ್ಟಂಬರ್ 2016 (15:01 IST)
ಎಬಿಡಿ ಅಂದರೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ವಿಪರೀತ ಅಭಿಮಾನ. ಹೀಗಾಗಿಯೇ ಅವರು ಬರೆದಿರುವ ಆತ್ಮಕಥೆ "ಎಬಿ: ದಿ ಆಟೋಬಯೋಗ್ರಾಫಿ', ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಬಾರೀ ಸದ್ದು ಮಾಡುತ್ತಿದೆ. ಭಾರತೀಯರ ಈ ಪ್ರೀತಿಗೆ ಎಬಿಡಿ ಮೂಕ ವಿಸ್ಮಿತರಾಗಿದ್ದಾರೆ

ಎಬಿಡಿ ವಿಲಿಯರ್ ಅವರ ಭಾರತೀಯ ಅಭಿಮಾನಿಗಳು ಅಂತರ್ಜಾಲದಲ್ಲಿ ಪುಸ್ತಕ ಖರೀದಿಗೆ ಸಾಲುಗಟ್ಟಿದ್ದಾರೆ ಎಂದು ಪುಸ್ತಕದ ಪ್ರಕಾಶಕ ಟೆರ್ರಿ ಮಾರಿಸ್ ತಿಳಿಸಿದ್ದಾರೆ.
 
ಈ ಪುಸ್ತಕ ವಿಲಿಯರ್ ಬಾಲ್ಯ, ಬದುಕಿನ ವಿವಿಧ ಮಜಲುಗಳು, ಶಾಲಾ ದಿನ, ಯಶಸ್ಸು, ಅನುಭವ, ಎದುರಿಸಿದ ವಿವಾದ ಇತ್ಯಾದಿಗಳನ್ನು ಹೊಂದಿದೆ. ಜತೆಗೆ ಭಾರತದೊಂದಿಗಿನ ತಮ್ಮ ಅನುಪಮ ನಂಟನ್ನು ಸಹ ಎಬಿಡಿ ಇದರಲ್ಲಿ ಹಂಚಿಕೊಂಡಿದ್ದಾರೆ. 
 
"2015ರಲ್ಲಿ ವಾಂಖೆಡೆಯಲ್ಲಿ ಭಾರತದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಹೋಗುವಾಗಿನ ಕ್ಷಣ ಎಂದೂ ಮರೆಯಲಾಗದ್ದು. ಅದು ಹೊಸ ಅನುಭವವನ್ನು ನೀಡಿತು. ಜನರು ಎಬಿ!ಎಬಿ! ಎಂದು ಎಷ್ಟು ದೊಡ್ಡದಾಗಿ ಕಿರುಚುತ್ತಿದ್ದರೆಂದರೆ ನನ್ನೊಳಗೆ ನಾ ಮಾತಾಡುತ್ತಿದ್ದುದು ನನಗೆ ಕೇಳಿಸದಾಯ್ತು. ಸಂಪೂರ್ಣ ಸರಣಿಯಾದ್ಯಂತ ಹೀಗೆ ನಡೆಯಿತು. ನಾನು ಭಾರತದ ನೆಲದಲ್ಲಿ ಆಡುತ್ತಿದ್ದರೂ ಸ್ವದೇಶದಲ್ಲೇ ಆಡಿದ ಅನುಭವ ನನಗಾಗುತ್ತಿತ್ತು. ಅವರ ತವರು ತಂಡದ ವಿರುದ್ಧ ಆಡುತ್ತಿದ್ದರೂ ನಾನು ಅವರಿಗೆ ಸೇರಿದವನು ಎಂಬಂತೆ ನನಗೆ ಬೆಂಬಲ ನೀಡುತ್ತಿದ್ದರು. ಭಾರತದಲ್ಲಿನ ಪ್ರತಿಯೊಂದು ಸರಣಿ ಕೂಡ ಕೂಡ ನನಗೆ ಮರೆಯಲಾಗದ್ದು ಎಂಬು ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ",  ಎಬಿಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾರಿಸ್ ಆಸೀಸ್ ಬೌಲಿಂಗ್ ಕೋಚ್