ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ರ್‍ಯಾನ್ ಹ್ಯಾರಿಸ್ ತಮ್ಮ ತವರು ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
27 ಟೆಸ್ಟ್ ಪಂದ್ಯ ಮತ್ತು 21 ಏಕದಿನ, ಮೂರು ಟಿ20 ಪಂದ್ಯಗಳನ್ನಾಡಿದ್ದ ಹ್ಯಾರಿಸ್ ಕಳೆದ ವರ್ಷ ಎಲ್ಲ ರೀತಿಯ ಕ್ರಿಕೆಟ್‌ಗಳಿಗೆ ವಿದಾಯ ಹೇಳಿದ್ದರು. ಟೆಸ್ಟ್ ವಿಭಾಗದಲ್ಲಿ 113 ವಿಕೆಟ್ ಕಿತ್ತಿದ್ದ ಅವರು ಏಕದಿನ ಪಂದ್ಯಗಳಲ್ಲಿ 44 ವಿಕೆಟ್‌ನ್ನು ಸಂಪಾದಿಸಿದ್ದಾರೆ.
19 ವರ್ಷದೊಳಗಿನವರ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಸಹ ಅವರಿಗಿದೆ.
ಈ ತಿಂಗಳ 27 ರಂದು ದಕ್ಷಿಣ ಆಫ್ರಿಕಾದ ಪ್ರವಾಸ ಮಾಡುತ್ತಿರುವ ತಂಡದ ಭಾಗವಾಗಲಿದ್ದಾರೆ ಹ್ಯಾರಿಸ್. ಇಲ್ಲಿ ಆಸೀಸ್ ಐರ್ಲೆಂಡ್ ವಿರುದ್ಧ 1 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಐದು ಏಕದಿನ ಪಂದ್ಯಗಳನ್ನಾಡಲಿದೆ.