ಜೆಡಿಎಸ್ ಪಕ್ಷದ ಮೂವರು ಶಾಸಕರು ತಪ್ಪು ಮಾಡಿದ್ದಾರೆ. ಅವರನ್ನು ಕ್ಷಮಿಸಿ ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳಿ ಎಂದು ಬಿಬಿಎಂಪಿ ಉಪಮೇಯರ್ ಎಸ್.ಪಿ.ಹೇಮಲತಾ ಜೆಡಿಎಸ್ ಬಂಡಾಯ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕರೆದ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಹೇಮಲತಾ, ಮೂವರು ಶಾಸಕರು ತಪ್ಪು ಮಾಡಿರುವುದು ನಿಜ. ಆದರೆ, ಅವರನ್ನುಕ್ಷಮಿಸುವ ದೊಡ್ಡ ಗುಣ ತೋರಬೇಕು ಎಂದು ಗೌಡರಿಗೆ ಮನವಿ ಮಾಡಿದರು.
ಹೇಮಲತಾರತ್ತ ತಿರುಗಿಯೂ ನೋಡದ ದೇವೇಗೌಡರು ನೋಡೋಣ ಎಂದಷ್ಟೆ ಪ್ರತಿಕ್ರಿಯೆ ನೀಡಿ ಮೌನಕ್ಕೆ ಶರಣಾದರು.
ಜೆಡಿಎಸ್ ಬಂಡಾಯ ಶಾಸಕರ ಪರವಹಿಸಿ ಮಾತನಾಡಿದ್ದರಿಂದ ದೇವೇಗೌಡರು ಸಿಡಿಮಿಡಿಗೊಂಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ