ಮಲ್ಲೇಶ್ವರಂನಲ್ಲಿ ಪ್ರಯಾಣಿಸುತ್ತಿದ್ದ ಸರಕಾರ ಬಸ್ ಮೇಲೆ ಬೃಹದಾಕಾರದ ಮರವೊಂದು ಬಿದ್ದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಚಲಿಸುತ್ತಿದ್ದ ಬಸ್ ಮೇಲೆ ಬೃಹದಾಕಾರಾದ ಮರವೊಂದು ಬುಡಸಮೇತು ಕಿತ್ತು ಬಿದ್ದಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪರಾಗಿದ್ದಾರೆ. ಆದರೆ, ಬಸ್ ಪಕ್ಕದಲ್ಲಿಯೇ ಚಲಿಸುತ್ತಿದ್ದ ಅಟೋ ವಾಹನ ಜಖಂಗೊಂಡಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬೃಹದಾಕಾರಾದ ಮರ ರಸ್ತೆಯ ಮೇಲೆ ಬಿದ್ದ ಪರಿಣಾಮವಾಗಿ ಮಾರ್ಗೋಸಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ರಸ್ತೆಯ ಪಕ್ಕದಲ್ಲಿರುವ ಮರಗಳು ಯಾವ ಸಮಯದಲ್ಲಿ ಉರುಳಿ ಬೀಳುತ್ತವೆಯೇ ಎನ್ನುವ ಆತಂಕ ಪ್ರಯಾಣಿಕರನ್ನು ಕಾಡುತ್ತಿದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ