Publish Date: Sun, 20 Mar 2022 (09:47 IST)
Updated Date: Sun, 20 Mar 2022 (09:49 IST)
ನವದೆಹಲಿ: ಪಕ್ಕದ ಮನೆಯ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ 88 ವರ್ಷದ ವೃದ್ಧ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಟೋಪಿ ಕೊಡಿಸುವುದಾಗಿ ಬಾಲಕಿಗೆ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದ ವೃದ್ಧ ಆಕೆ ಮೇಲೆ ಅತ್ಯಾಚಾರವೆಸಗಿದ್ದ. ಆತ ಅತ್ಯಾಚಾರವೆಸಗಿದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ಪೊಲೀಸರು ಪೋಸ್ಕೋ ಖಾಯಿದೆಯಡಿ ದೂರು ದಾಖಲಿಸಿದ್ದರು. ಆದರೆ ತನ್ನ ಮೇಲೆ ಕೇಸ್ ಬೀಳುತ್ತಿದ್ದಂತೇ ಜೈಲಿಗೆ ಹೋದರೆ ಮಾನ ಹೋಗುತ್ತದೆಂದು ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.