Select Your Language

Notifications

webdunia
webdunia
webdunia
webdunia

ಪತ್ನಿ ಜೊತೆ ಹೋಳಿ ಆಡಲು ಹೊರಟಿದ್ದ ಗೆಳೆಯನ ರಕ್ತದೋಕುಳಿ ಹರಿಸಿದ ಪತಿ

ಪತ್ನಿ ಜೊತೆ ಹೋಳಿ ಆಡಲು ಹೊರಟಿದ್ದ ಗೆಳೆಯನ ರಕ್ತದೋಕುಳಿ ಹರಿಸಿದ ಪತಿ
ಕೋಲ್ಕೊತ್ತಾ , ಭಾನುವಾರ, 20 ಮಾರ್ಚ್ 2022 (09:27 IST)
ಕೋಲ್ಕೊತ್ತಾ: ತನ್ನ ಪತ್ನಿ ಜೊತೆ ಹೋಳಿ ಆಡುವ ಬಯಕೆ ವ್ಯಕ್ತಪಡಿಸಿದ್ದ ಗೆಳೆಯನನ್ನು ಪತಿ ಕೊಲೆ ಮಾಡಿದ ಘಟನೆ ನಡೆದಿದೆ.

ಇಬ್ಬರು ಸ್ನೇಹಿತರು ತಮ್ಮ ಸಹಚರರೊಂದಿಗೆ ಮದ್ಯಪಾನ ಮಾಡಿದ್ದರು. ಹಬ್ಬದ ಹುರುಪು ಜೊತೆಗೆ ಮದ್ಯದ ಅಮಲಿನಲ್ಲಿ ಗೆಳೆಯ ನಿನ್ನ ಹೆಂಡತಿ ಜೊತೆ ಹೋಳಿ ಹಬ್ಬ ಆಚರಿಸಬೇಕು ಎಂದು ಹೇಳಿದಾಗ ಪತಿಯ ಕೋಪ ನೆತ್ತಿಗೇರಿತ್ತು.

ಈ ಸಂಬಂಧ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಇದೇ ಕೋಪದಲ್ಲಿ ಆರೋಪಿ ಪತಿ ಗೆಳೆಯನ ಮೇಲೆ ಗನ್ ನಿಂದ ಶೂಟ್‍ ಮಾಡಿದ್ದ. ತಕ್ಷಣವೇ ಸಂತ್ರಸ್ತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಹೆಚ್ಚಾಗಿದೆ ಗ್ಲಾಕೋಮಾ ಗಂಡಾಂತರ