Select Your Language

Notifications

webdunia
webdunia
webdunia
webdunia

ಕೊವಿಡ್ ನಿಯಮ ಉಲ್ಲಂಘಿಸಿ ಮಹಿಳೆಯೊಂದಿಗೆ ಲಿಪ್ ಲಾಕ್ ಮಾಡಿದ ಅಧಿಕಾರಿ

ಕೊವಿಡ್ ನಿಯಮ ಉಲ್ಲಂಘಿಸಿ ಮಹಿಳೆಯೊಂದಿಗೆ ಲಿಪ್ ಲಾಕ್ ಮಾಡಿದ ಅಧಿಕಾರಿ
ಪೆರು , ಶನಿವಾರ, 20 ಫೆಬ್ರವರಿ 2021 (12:00 IST)
ಪೆರು : ಪೆರುವಿನ ಲಿಮಾದ ಮಿರಾಪ್ಲೋರ್ಸ್ ಬೋರ್ಡ್ ವಾಕ್ ನಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಪೊಲೀಸ್ ಅಧಿಕಾರಿ ಹಾಗೂ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಕಿಸ್ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮಹಿಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಆಕೆಯ ವಾಹನವನನ್ಉ ರಸ್ತೆಯಲ್ಲಿ ತಡೆದ ಅಧಿಕಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ, ದಂಡ ಬಿಡಬೇಕೆಂದು ಮಹಿಳೆ ಅಧಿಕಾರಿಗೆ ಕಿಸ್ ನೀಡಲು ಮುಂದಾಗಿದ್ದಾಳೆ. ಇದಕ್ಕೆ ಅನುಮತಿಸಿದ ಅಧಿಕಾರಿ ಮಾಸ್ಕ್ ತೆಗೆದು ಸಹಕರಿಸಿದ್ದಾನೆ. ಇವರ ಲಿಪ್ ಲಾಕ್ ದೃಶ್ಯವನ್ನು ಟಿವಿ ಚಾನೆಲ್ ವಿಡಿಯೋ  ಮಾಡಿ ಬಿಡುಗಡೆ ಮಾಡಿದೆ.

ಈ ಹಿನ್ನಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6ನೇ ತರಗತಿಯ ವಿವಾದಾತ್ಮಕ ಪಠ್ಯ ಕೈಬಿಡಲು ರಾಜ್ಯ ಸರ್ಕಾರದ ನಿರ್ಧಾರ