Select Your Language

Notifications

webdunia
webdunia
webdunia
webdunia

ಶ್ರೀರಾಮನ ಆಶೀರ್ವಾದವಿಲ್ಲದೇ ಕಾರ್ಯಸಫಲತೆ ಅಸಾಧ್ಯ: ಸಿಎಂ ಯೋಗಿ

ಶ್ರೀರಾಮನ ಆಶೀರ್ವಾದವಿಲ್ಲದೇ ಕಾರ್ಯಸಫಲತೆ ಅಸಾಧ್ಯ: ಸಿಎಂ ಯೋಗಿ
ರಾಯ್ಪುರ್ , ಮಂಗಳವಾರ, 14 ನವೆಂಬರ್ 2017 (13:34 IST)
ಭಾರದಲ್ಲಿ ಶ್ರೀರಾಮನ ಆಶೀರ್ವಾದವಿಲ್ಲದೇ ಯಾವುದೇ ಕಾರ್ಯ ಸಾಧ್ಯವಾಗದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸಂತ-ಕಂ- ರಾಜಕಾರಣಿಯಾಗಿರುವ ಸಿಎಂ ಯೋಗಿ ಮಾತನಾಡಿ,  ರಾಮ್ ನಮ್ಮನಂಬಿಕೆಗಳ ಕೇಂದ್ರ ಬಿಂದುವಾಗಿರುವುದರಿಂದ ರಾಮನ ಆಶೀರ್ವಾದವಿಲ್ಲದೇ ಯಾವುದೇ ಕೆಲಸ ಸಫಲವಾಗುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
 
ಉತ್ತರಪ್ರದೇಶದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕಾಗಿ ತೆರಳುವ ಮುನ್ನ ಸಿಎಂ ಯೋಗಿ ಶ್ರೀರಾಮನ ಆಶೀರ್ವಾದ ಪಡೆದು ಪ್ರಚಾರ ಆರಂಭಿಸಿದ್ದಾರೆ.
 
ಸರ್ಕಾರ ಶೀಘ್ರದಲ್ಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.ಸರಕಾರ  ಎಲ್ಲರ ಭಾವನೆಗಳನ್ನು ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.
 
ರಾಯ್ಪುರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ಛತ್ತೀಸ್ ಗಢ್  ಶ್ರೀರಾಮ್ ದೇವರ ನನಿಹಾಲ್" ಎಂದು ನಂಬಲಾಗಿದೆ. ನಂಬಿಕೆಯ ಪ್ರಕಾರ, ರಾಮನು ಮೊದಲು 'ನನಿಹಾಲ್' ನಲ್ಲಿ ನೆಲೆಸಿದ ನಂತರ ಜನ್ಮಸ್ಥಳ ಅಯೋಧ್ಯಾಗೆ ತೆರಳಿದರು. ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
 
ಭಾರತ, ಅಯೋಧ್ಯೆಯೊಂದಿಗೆ ಹೆಚ್ಚಿನ ನಿಕಟ ಸಂಬಂಧ ಹೊಂದಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾ ನಿವಾಸದಲ್ಲಿ 1430 ಕೋಟಿ ಮೌಲ್ಯದ ಚಿನ್ನ, ವಜ್ರ, ನಗದು ಹಣ ಪತ್ತೆ