Select Your Language

Notifications

webdunia
webdunia
webdunia
webdunia

ತಾಜ್‌ಮಹಲ್ ನಮ್ಮ ಸಂಸ್ಕ್ರತಿ, ಇತಿಹಾಸದ ಭಾಗ: ಸಿಎಂ ಯೋಗಿ

ತಾಜ್‌ಮಹಲ್ ನಮ್ಮ ಸಂಸ್ಕ್ರತಿ, ಇತಿಹಾಸದ ಭಾಗ: ಸಿಎಂ ಯೋಗಿ
ಚಿತ್ರಕೋಟ್ , ಸೋಮವಾರ, 23 ಅಕ್ಟೋಬರ್ 2017 (15:25 IST)
ತಾಜ್‌ಮಹಲ್ ಭೇಟಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವುದರಿಂದ, ತಾಜ್‌ಮಹಲ್‌ನ್ನು ಯಾರೂ ದೂಷಿಸಬಾರದು. ತಾಜ್‌ಮಹಲ್ ನಮ್ಮ ಸಂಸ್ಕ್ರತಿ ಮತ್ತು ಇತಿಹಾಸದ ಭಾಗವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಉಲ್ಟಾ ಹೊಡೆದಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಜ್‌ಮಹಲ್ ನಮ್ಮ ಸಂಸ್ಕ್ರತಿ ಮತ್ತು ಇತಿಹಾಸದ ಭಾಗವಾಗಿದೆ. ನಾನು ತಾಜ್‌ಮಹಲ್‌ಗೆ ಭೇಟಿ ನೀಡಿ ತಾಜ್ ಸ್ಮಾರಕ ನಮ್ಮ ಪರಂಪರೆಯ ಭಾಗವೆಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಸಂದೇಶವನ್ನು ಕಳುಹಿಸಲು ಬಯಸುತ್ತೇನೆ. ಅದನ್ನು ಯಾರೂ ದೂಷಿಸಲು ಪ್ರಯತ್ನಿಸಬಾರದು ಎಂದು ಕೋರಿದ್ದಾರೆ. 
 
ಮುಂಬರುವ ತಾಜ್ ಮಹಲ್ ಭೇಟಿಯಲ್ಲಿ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು "ದೇಶದ್ರೋಹಿಗಳು" ನಿರ್ಮಿಸಿದ "ತಾಜ್ ಮಹಲ್ ಭಾರತೀಯ ಪರಂಪರೆಯ ಮೇಲೆ ಕಲಾವಿದೆ" ಎಂದು ಹೇಳಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
 
ಭಾರತೀಯ ಪರಂಪರೆಯಲ್ಲಿ ತಾಜ್‌ಮಹಲ್ ಒಂದು ಕಪ್ಪು ಚುಕ್ಕೆ. ಇದೊಂದು ದೇಶದ್ರೋಹಿಗಳು ನಿರ್ಮಿಸಿದ ಸ್ಮಾರಕ ಎನ್ನುವ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಹೇಳಿಕೆಗೆ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಇದು ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರವಾಸೋದ್ಯಮ ಆದಾಯವನ್ನು ಗಳಿಸಿದರೂ ಸಹ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರ ತನ್ನ ಪ್ರವಾಸೋದ್ಯಮ ಪುಸ್ತಕದಲ್ಲಿ ಸಾಂಪ್ರದಾಯಿಕ ಮೊಘಲ್ ವಾಸ್ತುಶಿಲ್ಪವಾದ ತಾಜ್‌ಮಹಲ್‌ನ್ನು ನಮೂದಿಸುವುದನ್ನು ಮರೆತುಹೋಗಿತ್ತು, 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಅಮೂಲ್ಯವಾದದು, ಮತದಾರರನ್ನು ಖರೀದಿಸಲು ಸಾಧ್ಯವಿಲ್ಲ: ರಾಹುಲ್