Publish Date: Sat, 26 Aug 2017 (11:05 IST)
Updated Date: Sat, 26 Aug 2017 (11:09 IST)
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ದೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಗೆ ಯಾವುದೇ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ರೋಹ್ಟಗಿ ಕಾರಾಗೃಹ ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ.
ಸ್ವಯಂ ಘೋಷಿತ ದೇವಮಾನವನಿಗೆ ವಿಶೇಷ ಕೊಠಡಿ, ಸೌಲಭ್ಯ ಹಾಗೂ ಸಹಾಯಕ್ಕೆ ಓರ್ವ ಸಿಬ್ಬಂದಿಯನ್ನೂ ನೇಮಿಸಲಾಗಿದೆ ಎಂಬ ವದಂತಿಗಳ ಹಿನ್ನಲೆಯಲ್ಲಿ ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ.
ಇತರ ಇಬ್ಬರು ಖೈದಿಗಳಿರುವ ಸಾಮಾನ್ಯ ಕೊಠಡಿಯಲ್ಲಿ ದೇರಾ ಮುಖ್ಯಸ್ಥನನ್ನು ಇರಿಸಲಾಗಿದೆ. ಇತರ ಸಾಮಾನ್ಯ ಖೈದಿಗಳಿಗೆ ನೀಡಲಾಗುವ ಆಹಾರ ಮತ್ತು ಸೌಲಭ್ಯವನ್ನೇ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.