Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೂ ಕೋಚಿಂಗ್ ಕೊಟ್ಟಿದ್ದನಂತೆ ಈ ದೇರಾ ಗುರು..!

ಗುರ್ಮೀತ್ ರಾಮ್ ರಹಿಮ್
ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ತಮ್ಮ ಎಲ್ಲೆ ಮೀರಿದ ವರ್ತನೆಯಿಂದ ಆಗಾಗ್ಗೆ ವಿವಾದಕ್ಕೀಡಾಗುತ್ತಾರೆ.  ಕ್ರಿಕೆಟಿಗ ವಿರಾಟ್ ಕೊಹ್ಲಿ, ಒಲಂಪಿಯನ್ ವಿಜೇಂದರ್ ಸಿಂಗ್`ಗೂ ತಾನೇ ಕೋಚ್ ನೀಡಿದ್ದೆ ಎಂದು ಹೇಳಿಕೊಂಡಿದ್ದೂ ಇದೆ.
 

ಅತ್ಯಾಚಾರದ ಜೊತೆ ಕೊಲೆ, ಬಲವಂತವಾಗಿ ಅನುಯಾಯಿಗಳಾಗಿ ಪರಿವರ್ತಿಸುವುದು ಹೀಗೆ ಹತ್ತು ಹಲವು ಆರೋಪಗಳು ಈತನ ಮೇಲಿವೆ. 2016ರಲ್ಲಿ ವಿರಾಟ್ ಕೊಹ್ಲಿ ಬಗ್ಗೆಯೂ ವಿವಾದಿತ ಹೇಳಿಕೆ ನೀಡಿದ್ದ ರಾಮ್ ರಹೀಮ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಕ್ಸರ್ ವಿಜೇಂದರ್`ಗೆ ತಾನೇ ಕೊಚಿಂಗ್ ನೀಡಿದ್ದೆ. ಅದಕ್ಕೆ ಅವರಿಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ಧಾರೆ. ಮೆಡಲ್ ಮತ್ತು ಟ್ರೊಫಿ ಗೆಲ್ಲುತ್ತಿದ್ದಾರೆ ಎಂದು ಹೇಳಿದ್ದ.

32 ಕ್ರೀಡೆಗಳಲ್ಲಿ ನಾನು ತೊಡಗಿಸಿಕೊಂಡಿದ್ದೆ. ರಾಷ್ಟ್ರೀಯ ಹಂತದ ಟೂರ್ನಮೆಂಟ್`ಗಳಲ್ಲೂ ಭಾಗವಹಿಸಿದ್ದೆ. ಅದೇ ರೀತಿ ಕೋಚಿಂಗ್ ನೋಡುವ ಮೂಲಕ ಕೊಹ್ಲಿ, ವಿಜೇಂದರ್`ರಂತಹ ಆಟಗಾರರನ್ನ ಸೃಷ್ಟಿಸಿದ್ದೇನೆ ಎಂದಿದ್ದ.





ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಫೋಸಿಸ್ ಚುಕ್ಕಾಣಿ ಹಿಡಿದ ನಂದನ್ ನಿಲೇಕಣಿ