Publish Date: Sat, 26 Aug 2017 (09:53 IST)
Updated Date: Sat, 26 Aug 2017 (09:56 IST)
ನವದೆಹಲಿ: ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಂ ಸಿಂಗ್ ನ ಕರಾಳ ದಂಧೆ ಹೇಗೆ ನಡೆಯುತ್ತಿತ್ತು ಎಂಬ ಭಯಾನಕ ಕತೆಗಳನ್ನು ಇಬ್ಬರು ‘ಸಾಧ್ವಿ’ಗಳು ಬಿಚ್ಚಿಟ್ಟಿದ್ದಾರೆ.
ದೇರಾ ಮುಖ್ಯಸ್ಥನಿಗೆ ಅಂಡರ್ ಗ್ರೌಂಡ್ ಸೀಕ್ರೆಟ್ ಬಂಗಲೆಯಿತ್ತು. ಇಲ್ಲಿ ಆತ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಈ ಸಾಧ್ವಿಗಳು ನ್ಯಾಯಾಲಯದ ಮುಂದೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.
“ಈ ಬಂಗಲೆಯಲ್ಲಿ ರಹೀಂ ಕಾವಲು ಕಾಯಲು ಮಹಿಳಾ ಗಾರ್ಡ್ ಗಳನ್ನೇ ನೇಮಿಸಲಾಗುತ್ತಿತ್ತು. ಅತ್ಯಾಚಾರವೆಸಗಲು ಆತ ‘ಮಾಫಿ’ ಎಂಬ ಕೋಡ್ ವರ್ಡ್ ಬಳಸುತ್ತಿದ್ದ’ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಇಬ್ಬರು ಸಾಧ್ವಿಗಳೂ ತಮ್ಮ ಅನುಭವ ಹೇಳಿಕೊಂಡಿದ್ದು, ಆತನ ಸಹವರ್ತಿಗಳು ತಮ್ಮ ಬಳಿ ‘ಪಿತಾಜಿ ಮಾಪಿ ನೀಡಿದ್ದಾರೆಯೇ? ಎಂದು ಕೇಳುತ್ತಿದ್ದರು. ಅದಾದ ಕೆಲವು ದಿನಗಳ ಬಳಿಕ ತಮ್ಮ ಮೇಲೆ ಆತನಿಂದ ಅತ್ಯಾಚಾರ ನಡೆಯಿತು. ಅಷ್ಟೇ ಅಲ್ಲ, ಇದನ್ನು ಹೊರಗೆ ಬಾಯ್ಬಿಡದಂತೆ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿದ್ದಾರೆ ಎನ್ನಲಾಗಿದೆ.