ಲಖನೌ: ಸೇವೆಯಲ್ಲಿರುವ ಪೊಲೀಸರು ಗಡ್ಡ ಬಿಡಲು ಅವಕಾಶವಿಲ್ಲ ಅಂತ ಉತ್ತರ ಪ್ರದೇಶದ ಹೈಕೋರ್ಟ್ ಮುಸ್ಲಿಂ ಸಮುದಾಯದಕ್ಕೆ ಸೇರಿದ್ದ ವ್ಯಕ್ತಿಯೊಬ್ಬರ ಅರ್ಜಿಯನ್ನು ಆಲಿಸಿ ಅವರ ಅರ್ಜಿಯನ್ನು ವಜಾ ಮಾಡಿದೆ.
ಗಡ್ಡವನ್ನು ಹೊಂದಿರುವುದು ಅಕ್ಟೋಬರ್ 26, 2020 ರಂದು ರಾಜ್ಯದ ಪೋಲಿಸ್ ಮಹಾನಿರ್ದೇಶಕರು ಹೊರಡಿಸಿದ ಸುತ್ತೋಲೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ ಇದೇ ವೇಳೆ ತಪ್ಪು ನಡವಳಿಕೆ ಮಾತ್ರವಲ್ಲದೇ ದುಷ್ಕೃತ್ಯವಾಗಿದೆ ಅಂತ ಇದೇ ವೇಳೆ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಧೀಶ ರಾಜೇಶ್ ಸಿಂಗ್ ಚೌಹಾಣ್ ಅವರನ್ನೊಳಗೊಂಡ ಏಕ ನ್ಯಾಯಾಧೀಶರ ಪೀಠವು ಪೊಲೀಸ್ ಕಾನ್ಸಟೇಬಲ್ ಮೊಹಮ್ಮದ್ ಫರ್ಮನ್ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿ ಈ ಆದೇಶವನ್ನು ಹೊರಡಿಸಿದೆ. ರಾಜ್ಯ ಡಿಜಿಪಿ ಅಕ್ಟೋಬರ್ 26, 2020 ರಂದು ಸುತ್ತೋಲೆಯಲ್ಲಿ ಪೊಲೀಸರು ಗಡ್ಡ ಬಿಡುವುದನ್ನು ನಿಷೇಧಿಸಿದ್ದರು ಇದಕ್ಕೆ ಸಂಬಂಧಪಟ್ಟಂತೆ, ಪೊಲೀಸ್ ಕಾನ್ಸಟೇಬಲ್ ಮೊಹಮ್ಮದ್ ಫರ್ಮನ್ ಎನ್ನುವವರು ಡಿಜಿಪಿ ಆದೇಶದ ವಿರುದ್ದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕಾನ್ಸಟೇಬಲ್ ಮೊಹಮ್ಮದ್ ಫರ್ಮನ್ ಎನ್ನುವವರು ಡಿಜಿಪಿ ಆದೇಶಕ್ಕೂ ಸೆಡ್ಡು ಹೊಡೆದು ಗಡ್ಡಬಿಟ್ಟಿದ್ದರು, ಬಳಿಕ ಅವರನ್ನು ಸೇವ ನಿಯಮಗಳಿಗೆ ಅನುಗುಣವಾಗಿ ಇಲಾಖೆ ಅಮಾನತ್ತು ಮಾಡಲಾಗಿತ್ತು. ಬಳಿಕ ಕಾನ್ಸ್ಟೇಬಲ್ ತನ್ನ ಅಮಾನತು ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು, ಧರ್ಮದ ಸ್ವಾತಂತ್ರ್ಯದ ಬಗ್ಗೆ ಪರಿಚ್ಛೇದ 25 ಅನ್ನು ಉಲ್ಲೇಖಿಸಿ, ಗಡ್ಡವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕೋರಿದರು. ಆದರೆ ನ್ಯಾಯಾಪೀಠ ಉನ್ನತ ಅಧಿಕಾರಿಗಳು ನಿರ್ದೇಶನ ನೀಡಿದರೂ ಗಡ್ಡ ಬೋಳಿಸದಿರುವುದು ಪೊಲೀಸ್ ಮಹಾನಿರ್ದೇಶಕರ ಸುತ್ತೋಲೆಯ ಉಲ್ಲಂಘನೆಯಾಗಿದೆ. ಶಿಸ್ತಿನ ಪಡೆಯ ಸದಸ್ಯರಿಂದ ಗಡ್ಡವನ್ನು ಉಳಿಸಿಕೊಳ್ಳುವುದನ್ನು ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಿಸಲಾಗುವುದಿಲ್ಲ ಎಂದು ಹೇಳಿ ಅರ್ಜಿದಾರನ ಮನವಿಯನ್ನು ವಜಾಮಾಡಿ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚನೆ ನೀಡಿತು.