Webdunia - Bharat's app for daily news and videos

Install App

ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಸುಳ್ಳು ಹೇಳಿದ್ದೇವೆ ಕ್ಷಮಿಸಿ: ತಮಿಳುನಾಡು ಸಚಿವ

Webdunia
ಶನಿವಾರ, 23 ಸೆಪ್ಟಂಬರ್ 2017 (19:28 IST)
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಜನತೆಗೆ ಸುಳ್ಳು ಹೇಳಿದ್ದೇವೆ. ಅದಕ್ಕಾಗಿ ಜನತೆಯ ಕ್ಷಮೆಯಾಚಿಸುತ್ತೇವೆ ಎಂದು ಅರಣ್ಯ ಖಾತೆ ಸಚಿವ ಸಿ. ಶ್ರೀನಿವಾಸನ್ ಹೇಳಿಕೆ ನೀಡಿ ಆಘಾತ ಮೂಡಿಸಿದ್ದಾರೆ.
ಪೋಸ್ ಗಾರ್ಡನ್ ನಿವಾಸದಲ್ಲಿ ಉಸಿರಾಟದ ತೊಂದರೆಯ ಕಾರಣದಿಂದಾಗಿ ಜಯಲಲಿತಾ, ಸೆಪ್ಟೆಂಬರ್ 22 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಪೋಲೋ ಹಾಸ್ಪಿಟಲ್‌ನಲ್ಲಿ 75 ದಿನಗಳ ಜೀವನ್ಮರಣದ ಹೋರಾಟದ ನಂತರ ಡಿಸೆಂಬರ್ 5 ರಂದು ಮೃತಪಟ್ಟಿದ್ದರು.
 
ಅವಳು ಆಸ್ಪತ್ರೆಯಲ್ಲಿ ಇಡ್ಲಿ ತಿನ್ನುತ್ತಿದ್ದಳು ಎನ್ನುವ ನಮ್ಮ ಹೇಳಿಕೆ ಅಪಪ್ಟ ಸುಳ್ಳು.ಯಾಕೆಂದರೆ. ಯಾರೊಬ್ಬರನ್ನು ಜಯಲಲಿತಾ ಹತ್ತಿರ ಹೋಗಲು ಬಿಡುತ್ತಿರಲಿಲ್ಲ. ನಮಗೆ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯೂ ಇರಲಿಲ್ಲ ಎಂದು ತಿಳಿಸಿದ್ದಾರೆ.
 
ಎಐಎಡಿಎಂಕೆ ಸಚಿವ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವ ಶ್ರೀನಿವಾಸನ್ ಜನತೆಯ ಕ್ಷಮೆ ಯಾಚಿಸಿದ್ದಾರೆ.
 
ಆಸ್ಪತ್ರೆಗೆ ಹಲವಾರು ನಾಯಕರು ಭೇಟಿ ನೀಡಿದ್ದರು. ಅವರನ್ನು ಮೊದಲ ಮಹಡಿಗೆ ಮಾತ್ರ ತೆರಳಲು ಅನುಮತಿ ನೀಡಲಾಗುತ್ತಿತ್ತು. ಜಯಲಲಿತಾ ಭೇಟಿಗೆ ಬಂದ ನಾಯಕರನ್ನು ಕುರ್ಚಿ ಅಥವಾ ನೆಲದ ಮೇಲೆ ಕುಳಿತುಕೊಳ್ಳಲು ಹೇಳಿ ಕೆಲ ಮಾತುಕತೆಗಳ ನಂತರ ಮರಳಬೇಕಾಗಿತ್ತು. ಅಮ್ಮನನ್ನು ನಾವ್ಯಾರೂ ನೋಡಲೇ ಇಲ್ಲ ಎಂದು ತಿಳಿಸಿದ್ದಾರೆ.
 
ಗವರ್ನರ್ ಸಿ ವಿದ್ಯಾಸಾಗರ್ ರಾವ್ ಮತ್ತು ಇತರ ಹಲವು ಗಣ್ಯರನ್ನು ಜಯಲಲಿತಾ ಕೋಣೆಯ ಮುಂಚೆಯೇ ನಿಲ್ಲಿಸಲಾಗುತ್ತಿತ್ತು. ನಾವು ಎಲ್ಲರೂ ಸುಳ್ಳು ಹೇಳಿದ್ದರಿಂದ ಪಕ್ಷದ ರಹಸ್ಯವು ಸೋರಿಕೆಯಾಗಲಿಲ್ಲ" ಎಂದು ಹೇಳಿದ್ದಾರೆ.
 
ಒಂದು ವಾರದ ಹಿಂದೆ, ಸಚಿವ ಅವರು ಶಶಿಕಲಾ ಮತ್ತು ಅವರ ಕುಟುಂಬ ಆಸ್ಪತ್ರೆಯಲ್ಲಿ ಜಯಲಲಿತಾ ಅವರ ಚಿಕಿತ್ಸೆಯ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕಳೆದ ವಾರ ಸಚಿವರೊಬ್ಬರು, ಶಶಿಕಲಾ ಮತ್ತು ಅವರ ಕುಟುಂಬದ ಸದಸ್ಯರು ಜಯಲಲಿತಾ ಆರೋಗ್ಯದ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡಿದ್ದರು ಎಂದು ಆರೋಪಿಸಿದ್ದರು.
 
ಜಯಲಲಿತಾ ಸಾವಿಗೆ ಶಶಿಕಲಾ ಮತ್ತು ಆಕೆಯ ಕುಟುಂಬದವರೇ ಹೊಣೆ. ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಲು ಯಾರಿಗೂ ಅವಕಾಶ ನೀಡಲಿಲ್ಲ. ಅಮ್ಮ ಹೇಗೆ ಇಹಲೋಕ ತ್ಯಜಿಸಿದರು ಎನ್ನುವುದು ಶಶಿಕಲಾಗೆ ಮಾತ್ರ ಗೊತ್ತಿದೆ ಎಂದು ಅರಣ್ಯ ಖಾತೆ ಸಚಿವ ಸಿ.ಶ್ರೀನಿವಾಸನ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments