Select Your Language

Notifications

webdunia
webdunia
webdunia
webdunia

ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ : ಅಮಿತ್ ಶಾ

ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ : ಅಮಿತ್ ಶಾ
ಇಟಾನಗರ , ಮಂಗಳವಾರ, 11 ಏಪ್ರಿಲ್ 2023 (08:54 IST)
ಇಟಾನಗರ : ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
 
ಅರುಣಾಚಲ ಪ್ರದೇಶದ ಗಡಿ ಗ್ರಾಮವಾದ ಕಿಬಿತೂದಿಂದ ವೈಬ್ರಂಟ್ ವಿಲೇಜಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಕಬಳಿಸಲು ಸಾಧ್ಯವಿಲ್ಲ. 2014ರ ಮೊದಲು, ಇಡೀ ಈಶಾನ್ಯ ಪ್ರದೇಶವು ಪ್ರಕ್ಷುಬ್ಧ ಪ್ರದೇಶವೆಂದು ಕರೆಯಲ್ಪಟ್ಟಿತು. ಆದರೆ ಕಳೆದ 9 ವರ್ಷಗಳಲ್ಲಿ, ಪ್ರಧಾನಿ ಮೋದಿಯವರ ಯೋಜನೆಯಿಂದಾಗಿ, ಈಶಾನ್ಯವನ್ನು ಈಗ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶವೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.

ಐಟಿಬಿಪಿ ಯೋಧರು ಹಾಗೂ ಸೇನೆಯು ನಮ್ಮ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರಣದಿಂದ ಇಂದು ದೇಶದ ಜನರು ಅವರ ಮನೆಗಳಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಿದೆ ಎಂದು ಇಂದು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ ಎಂದು ಸೇನೆ ಹಾಗೂ ಗಡಿ ಪೊಲೀಸರನ್ನು ಶ್ಲಾಘಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಹಣ ಕೊಟ್ಟಿಲ್ಲ, ಸ್ಟಾಲಿನ್ 1 ಲಕ್ಷ ಚೆಕ್ ಕೊಟ್ಟಿದ್ದಾರೆ : ಬೊಮ್ಮನ್