Select Your Language

Notifications

webdunia
webdunia
webdunia
webdunia

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗಲಭೆಕೋರರನ್ನ ತಲೆಕೆಳಗಾಗಿ ನೇತು ಹಾಕ್ತೀವಿ : ಅಮಿತ್ ಶಾ

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗಲಭೆಕೋರರನ್ನ ತಲೆಕೆಳಗಾಗಿ ನೇತು ಹಾಕ್ತೀವಿ : ಅಮಿತ್ ಶಾ
ಪಾಟ್ನಾ , ಸೋಮವಾರ, 3 ಏಪ್ರಿಲ್ 2023 (10:53 IST)
ಪಾಟ್ನಾ : ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂದನ್ ಸರ್ಕಾರವು ಬಿಹಾರದ ಸಸಾರಾಮ್ ಮತ್ತು ಷರೀಫ್ ಪಟ್ಟಣಗಳಲ್ಲಿ ಕೋಮು ಗಲಭೆ, ಹಿಂಸಾಚಾರ ತಡೆಗಟ್ಟುವಲ್ಲಿ ವಿಫಲವಾಗಿದೆ.

ಮುಂದಿನಬಾರಿ ಇಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಗಲಭೆಕೋರರನ್ನ ತಲೆಕೆಳಗಾಗಿ ನೇತುಹಾಕುವ ಮೂಲಕ ಗಲ್ಲಿಗೇರಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಗುಡುಗಿದ್ದಾರೆ.

ಬಿಹಾರದ ನವಾಡ ಜಿಲ್ಲೆಯ ಹಿಸುವಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, 2025ಕ್ಕೆ ಬಿಹಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನ ತಲೆಕೆಳಗಾಗಿ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಿದ್ದಾರೆ.  ಈಗಾಗಲೇ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ 40 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತವಾಗಿದೆ.

ಬಿಹಾರದ ಜನರು ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಲು ನಿರ್ಧರಿಸಿದ್ದಾರೆ. ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನಿಯಾಗಾಬೇಕೆಂದು ದೇಶದ ಜನ ಬಯಸಿದ್ದಾರೆ. ಇದರಿಂದ ನಿತೀಶ್ ಕುಮಾರ್ ಪ್ರಧಾನಿಯಾಗಬೇಕೆಂಬ ಕನಸಿನಿಂದ ದೂರ ಸರಿದಿದ್ದಾರೆ ಎಂದು ಕುಟುಕಿದರು. 

 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೇಲೆ ಎಫ್ಐಆರ್ ದಾಖಲು?