Select Your Language

Notifications

webdunia
webdunia
webdunia
webdunia

ಬಿಜೆಪಿ ಜೇನುಗೂಡಿಗೆ ಕೈ ಹಾಕಿ ಮೀಸಲಾತಿ ಕೊಟ್ಟಿದೆ : ಕೋಟಾ ಶ್ರೀನಿವಾಸ್

BJP has put its hands in the beehive and given reservation
bangalore , ಭಾನುವಾರ, 2 ಏಪ್ರಿಲ್ 2023 (20:10 IST)
ಮೀಸಲಾತಿಯ ಜೇನುಗೂಡಿಗೆ ನಾವು ಕೈ ಹಾಕಿದ್ದೇವೆ.ಈ ನಿರ್ಧಾರವನ್ನ ಎಲ್ಲರೂ ಸ್ವಾಗತ ಮಾಡಬೇಕು.ಒಕ್ಕಲಿಗ,ಲಿಂಗಾಯತರಿಗೆ ಮೀಸಲಾತಿ ನೀಡಿದ್ದೇವೆ.ಮೀಸಲಾತಿ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ.ನಾವು ಕೊಟ್ಟಿರುವ ಮೀಸಲಾತಿ ತೆಗೆಯುತ್ತೇವೆ ಅಂತಾರೆ..ಈ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಕ್ಲಾರಿಟಿ ನೀಡಬೇಕು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಅಗ್ರಹಿಸಿದ್ರು.  ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,  ಮೀಸಲಾತಿ ತೆಗೆಯುವುದಾದರೆ ಕಾಂಗ್ರೆಸ್ ನ ಉದ್ದೇಶವೇನು ಎಂದು ಪ್ರಶ್ನಿಸಿದ್ರು... ಇನ್ನು ಚುನಾವಣೆ ಟೈಮ್ ನಲ್ಲಿ ಮೀಸಲಾತಿ ಘೋಷಣೆ ವಿಚಾರಕ್ಕೆ ಮಾತನಾಡಿದ ಅವರು ಎಲ್ಲದರಲ್ಲೂ ರಾಜಕೀಯ ಉದ್ದೇಶ ಇದ್ದೇ ಇರುತ್ತೆ...ನಾವು ಈಗ ಮಾಡಿದ್ದೇವೆ, ಕಾಂಗ್ರೆಸ್ ಏನು ಮಾಡಿದೆ...ಬಿಎಸ್ ವೈ ಮನೆ ಮೇಲೆ ಬಂಜಾರ ಸಮುದಾಯ ದಾಳಿ ನಾವು ಮಾಡಿಸಿದ್ದು ಅಂತ ಕಾಂಗ್ರೆಸ್ ನವರು ಹೇಳ್ತಾರೆ.ಈಗ ಹೇಳಿ ಯಾರು ದಾಳಿ ಮಾಡಿದ್ದಾರೆ ಅಂತ ಎಂದು ಕಿಡಿಕಾರಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಕಿ ಪ್ರತಿಭಟನಕಾರರಿಗೆ ಪೊಲೀಸರಿಂದ ನೋಟಿಸ್ ಜಾರಿ!