Select Your Language

Notifications

webdunia
webdunia
webdunia
webdunia

ನಟಿಯರಾಗಬೇಕು ಅನ್ನೋರೆ ಟಾರ್ಗೆಟ್..!

Annore Target should become an actress
bangalore , ಭಾನುವಾರ, 2 ಏಪ್ರಿಲ್ 2023 (17:20 IST)
ಹೇ ಯಂಗ್ ಗರ್ಲ್ಸ್ ನಿಮ್ಗೆ ಹೀರೋಯಿನ್ ಆಗ್ಬೇಕು ಅಂತಾ ಆಸೆ ಇದ್ಯಾ.. ಹಿರೋಯಿನ್ ಚಾನ್ಸ್ ಕೊಡಿಸಿದ್ರೆ ಸಾಕಪ್ಪ ಅಂತಾ ಕಾಯ್ತಿದ್ದೀರ.. ಹಿರೋಯಿನ್ ಚಾನ್ಸ್ ಕೊಡಿಸ್ತೀನಿ ಅಂತಾ ಹೇಳಿ ಯಾರಾದ್ರು ನಿಮ್ಮನ್ನ ಕಾಂಟ್ಯಾಕ್ಟ್ ಮಾಡಿದ್ದಾರಾ.. ಹಾಗಾದ್ರೆ ಒಮ್ಮೆ ಹುಷಾರಾಗಿರಿ.. ಸಿನಿಮಾದಲ್ಲಿ ಹಿರೋಯಿನ್ ಚಾನ್ಸ್ ಕೊಡಿಸ್ತೀನಿ ಅಂತಾ 58ಜನಕ್ಕೆ ಮೋಸ ಮಾಡಿ ವಂಚಕನೊಬ್ಬ ಸಿಕ್ಕಾಕೊಂಡಿದ್ದಾನೆ.

ಆಹಾ.. ಕೋಟು.. ಸೂಟು.. ಬೂಟು.. ಅಬ್ಹಾ ಸ್ಟಾರ್ ಹೀರೋ ಹೀರೋಯಿನ್ ಗಳ ಜೊತೆ ಫೋಟೋ.. ಓಹೋ.. ಪೂಜಾ ಹೆಗ್ಡೆ ಜೊತೆ.. ಲವ್ಲಿ ಸ್ಟಾರ್ ಪ್ರೇಮ್ ಜೊತೆ.. ಓಹೋ ಸಿಂಗಾರ ಸಿರಿಯೇ ಸಪ್ತಿಮಿ ಗೌಡ ಜೊತೆಯೂ ಕಾಣಿಸ್ತಿದ್ದಾನೆ.. ಇದೆಲ್ಲಾ ನೋಡ್ತೊದ್ರೆ ಈ ಮನುಷ್ಯ ಸಿನಿಮಾ ಇಂಡಷ್ಟ್ರೀಲಿ ಒಳ್ಳೆ ಕಾಂಟ್ಯಾಕ್ಟ್ ಹೊಂದಿರೋ ತರ ಇದ್ದಾನೆ ಅನ್ಸುತ್ತೆ ಅಲ್ವಾ.. ಹಾಗೇನಾದ್ರು ಅಂದ್ಕೊಂಡ್ರೆ ಅದು 100%ತಪ್ಪು.. ಇದೇ ರೀತಿ ಸಿನಿಮಾ ಇಂಡಷ್ಟ್ರಿಗೆ ಕಾಂಟ್ಯಾಕ್ಟ್ ಇದಾನೆ ಅಂತಾ ಈತನನ್ನ ನಂಬಿದ್ದ ಬರೋಬ್ಬರಿ 58ಜನರಿಗೆ ಈ ವ್ಯಕ್ತಿ ವಂಚನೆ ಮಾಡಿದ್ದು ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ

ಅಂದ್ಹಾಗೆ ಈತರ ಸ್ಟೈಲಿಷ್ ಲುಕ್ ನಲ್ಲಿ ಫೋಟೋಗೆ ಪೋಸ್ ಕೊಟ್ಟಿರೋ ಈತನ ಹೆಸ್ರು ಧವನ್ ಸೋಹಾ ಅಂತಾ.. ಇನ್ಸ್ಟಾಗ್ರಾಮ್ ನಲ್ಲಿ ಫುಲ್ ಆ್ಯಕ್ಟೀವ್ ಇರೋ ಈತ ಈ ರೀತಿ ಸ್ಟಾರ್ ನಟ ನಟಿಯರ ಜೊತೆ ಫೋಟೋ ತೆಗಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದ.. ಅಷ್ಟೇ ಅಲ್ಲ ಒಂದು ಆ್ಯಕ್ಟಿಂಗ್ ಸ್ಕೂಲ್‌ ಅನ್ನೂ ತೆಗೆದಿದ್ದ.. ಸ್ಟಾರ್ ಗಳ ಜೊತೆ ಫೋಟೋ ತನ್ನ ಆ್ಯಕ್ಟಿಂಗ್ ಸ್ಕೂಲ್ ಹೆಸ್ರು ಬಳಸಿಕೊಂಡು ಯುವತಿಯರಿಗೆ ಮೋಸ ಮಾಡ್ತಿದ್ದ ಅನ್ನೋದು ತನಿಖೆ ವೇಳೆ‌ ಗೊತ್ತಾಗಿದೆ.. ಇನ್ಸ್ಟಾಗ್ರಾಮ್ ಮೂಲಕ ನಟಿಯರಾಗ್ಬೇಕು ಅಂತಾ ಆಸೆ ಕಟ್ಟಿಕೊಂಡಿರೋ ಪ್ರತಿಭಾವಂತ ಯುವತಿಯರನ್ನ ಕಾಂಟ್ಯಾಕ್ಟ್ ಮಾಡ್ತಿದ್ದ ಆರೋಪಿ ತನಗೆ ಇಂಡಷ್ಟ್ರಿಯಲ್ಲಿ ಒಳ್ಳೆ ಕಾಂಟ್ಯಾಕ್ಟ್ ಇದೆ ಅಂತಾ ನಂಬಿಸ್ತಿದ್ದ.. ಸ್ಟಾರ್ ಗಳ ಜೊತೆ ಇರೋ ಫೋಟೋಸ್ ತೋರ್ಸಿ ಹೀರೋಯಿನ್ ಮಾಡಿಸ್ತೀನಿ ಅಂತಾ ನಂಬಿಸಿ ಯುವತಿಯರಿಂದ 50-60ಸಾವಿರ ಹಣ ಈಸ್ಕೊಂಡು ವಂಚನೆ ಮಾಡ್ತಿದ್ನಂತೆ.. ಈ ರೀತಿ ಹಲವು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಧವನ್ ಸೋಹಾನನ್ನ ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಶಾರ್ಟ್ ಮೂವೀಸ್ ಮಾಡ್ತಿರೋ ಯುವತಿಯರು ಇಂತವ್ರನ್ನ ನಂಬಿ ಸಿನಿಮಾದಲ್ಲಿ ಚಾನ್ಸ್ ಸಿಕ್ಕುತ್ತೆ ಅಂತಾ ಹಣ ಖರ್ಚು ಮಾಡ್ತಿದ್ದಾರೆ.. ಇಂತೋರನ್ನ ನಂಬಿ ಮೋಸ ಹೋಗೋ ಮುನ್ನ ಎಚ್ಚರವಾಗಿರಿ
 

Share this Story:

Follow Webdunia kannada

ಮುಂದಿನ ಸುದ್ದಿ

ಯಲಹಂಕ ವಲಯ*ಯಲಹಂಕ ವಲಯ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ