Select Your Language

Notifications

webdunia
webdunia
webdunia
webdunia

ಸೋಲು ಕಾಣದ ಕಾಗೇರಿ ಕ್ಷೇತ್ರದಲ್ಲಿ ಚುನಾವಣೆ ಹವಾ

ಸೋಲು ಕಾಣದ ಕಾಗೇರಿ ಕ್ಷೇತ್ರದಲ್ಲಿ ಚುನಾವಣೆ ಹವಾ
ಕಾರವಾರ , ಶನಿವಾರ, 1 ಏಪ್ರಿಲ್ 2023 (13:44 IST)
ಕಾರವಾರ : ವಿಧಾನಸಭಾ ಚುನಾವಣೆ ಬಂದಾಗಲೆಲ್ಲ ಶಿರಸಿಯಲ್ಲಿ ಬಿಜೆಪಿಯ ಕಾಗೇರಿಯೇ ಗೆಲ್ಲುತ್ತಾರೆ ಎಂಬ ಮಾತೊಂದಿದೆ. ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗಿನಿಂದಲೂ `ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದಾರೆ.
 
ಬಿಜೆಪಿಯ ಪ್ರಬಲ ಬ್ರಾಹ್ಮಣ ನಾಯಕ ಕಾಗೇರಿಯನ್ನು ಎದುರಿಸಲು ಕಾಂಗ್ರೆಸ್ನಲ್ಲಿ ಇನ್ನೊಂದು ಜನಾಂಗದ ಪ್ರಬಲ ನಾಮಧಾರಿ ನಾಯಕ ಭೀಮಣ್ಣ ನಾಯ್ಕರನ್ನು ಮತ್ತೊಮ್ಮೆ ಕಣಕ್ಕಿಳಿಸಲು ವೇದಿಕೆ ಸಜ್ಜಾಗಿದೆ.

ಸುಮಾರು ಕಾಲು ಶತಮಾನಗಳಿಂದ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಕಿತ್ತುಕೊಳ್ಳಬೇಕು ಎಂದು ಎದುರಾಳಿ ಪಕ್ಷಗಳು ತಂತ್ರ ಹುಡುಕುತ್ತಿವೆ. ಹೀಗಾಗಿ ಕಾಗೇರಿ ಎದುರು ನಾಮಧಾರಿ ಹಾಗೂ ಬ್ರಾಹ್ಮಣ ನಾಯಕರನ್ನು ನಿಲ್ಲಿಸಿ ಸೋಲಿಸಬೇಕು ಎಂಬ ಜಾತಿ ಲೆಕ್ಕಾಚಾರ ವಿರೋಧ ಪಕ್ಷ ಹಾಕುತ್ತಿವೆ.

ಈ ನಡುವೆ ಬಿಜೆಪಿಯಲ್ಲೇ ಕಾಗೇರಿಗೆ ಈ ಬಾರಿ ಟಿಕೆಟ್ ತಪ್ಪಿಸಬೇಕು ಎಂಬ ಪ್ರಯತ್ನಗಳೂ ಸಹ ನಡೆದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಸದ್ಯದ ರಾಜಕೀಯ ಚಿತ್ರಣ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಎರಡನೇ ಪಟ್ಟಿ ಬಿಡಗಡೆ ಸಾಧ್ಯತೆ