ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

Webdunia
ಸೋಮವಾರ, 21 ಏಪ್ರಿಲ್ 2014 (13:17 IST)
ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.
 
ಕಲ್ಲಿದ್ದಲು ನಗರ ಧನಬಾದ್‌ನಲ್ಲಿ  ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿಯವರ ಮೇಲೆ ಹರಿಹಾಯ್ದರು.  "ಮೋದಿ ಕಾ ಕೋಯಿ ಲೆಹರ್ ನಹೀಂ ಹೈ, ಮೋದಿ ಕಾ ಜೆಹರ್ ಹೈ"( ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ) ಎಂದು ರಮೇಶ್ ಟೀಕಿಸಿದರು. 
ಧನಬಾದ್‌ನಿಂದ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಅಜಯ್ ದುಬೆ ಪರ ಪ್ರಚಾರ ಕೈಗೊಂಡಿದ್ದ ಅವರು ರಾಜ್ಯದ ಅತಿ ಕೆಟ್ಟ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸರಂದಾ ಕಾಡಿನಲ್ಲಿ  ಮತದಾನದ ಪ್ರಮಾಣ ಶೇಕಡಾವಾರು ಹೆಚ್ಚಳವಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
 
"ಈ ಹಿಂದೆ ಜನರು ತಮ್ಮ ಮತ ಚಲಾಯಿಸಲು  ಹೊರಬರುತ್ತಿರಲಿಲ್ಲ . ಈ ಬಾರಿ ಅಲ್ಲಿ ಪ್ರತಿಶತ 70 ರಷ್ಟು ಮತದಾನವಾಗಿದೆ " ಎಂದು ಅವರು ಹೇಳಿದರು.
 
ರಮೇಶ್ ಸಹ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಪಿ ಎನ್ ಸಿಂಗ್ ವಿರುದ್ಧ ದಾಳಿ ನಡೆಸಿದ ಅವರು "ನಾನು ಸಂಸತ್ತಿನಲ್ಲಿ ಅಡಿಕೆ ತಿನ್ನುವ ಸಿಂಗ್‌ರನ್ನು ಮಾತ್ರ ನೋಡಿದ್ದೇನೆ. ಅವರು ಒಂದು ಪ್ರಶ್ನೆ ಕೇಳುವುದಿಲ್ಲ" ಎಂದು ಮೂದಲಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments