Select Your Language

Notifications

webdunia
webdunia
webdunia
webdunia

ಇಂದು ನಟಿ ಹೇಮಾಮಾಲಿನಿ ಪರ ಪ್ರಚಾರ ಮಾಡಲಿರುವ ಮೋದಿ

ನಟಿ ಹೇಮಾಮಾಲಿನಿ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಂದು ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ ಪರ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದು ಇಟಾ, ಹಥ್ರಾಸ್, ಫಿರೋಜಾಬಾದ್ ಮತ್ತು ಮಥುರಾಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ  ಎಂದು ವರದಿಯಾಗಿದೆ.
ಮಥುರಾದಲ್ಲಿ "ಡ್ರೀಮ್ ಗರ್ಲ್" ಹೇಮಾಮಾಲಿನಿ ಪರ ಮತ್ತು  ಇಟಾದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮಗ ರಾಜ್ ವೀರ್ ಸಿಂಗ್ ಪರ ಅವರು ಪ್ರಚಾರ ಕೈಗೊಳ್ಳಲಿದ್ದಾರೆ.
 
ಫಿರೋಜಾಬಾದ್ ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ (ಎಸ್ಪಿ)  ಹೆಚ್ಚಿನ ಸ್ಥಾನವನ್ನು ಗಳಿಸಿಕೊಡಲಿದೆ ಎಂದು ಹೇಳಲಾಗುತ್ತಿದ್ದು, ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಮಗ ಅಕ್ಷಯ್ ಪ್ರತಾಪ್ ಸಿಂಗ್  ಇಲ್ಲಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅಕ್ಷಯ್  ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್‌ರ ಸೋದರ ಸಂಬಂಧಿಯಾಗಿದ್ದು ಆಡಳಿತ ಪಕ್ಷ ಅವರ ವಿಜಯವನ್ನು ಖಚಿತಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ.

Share this Story:

Follow Webdunia kannada