ಮೋದಿಗೆ ವಿವೇಕ್ ಒಬೆರಾಯ್ ಸಮರ್ಥನೆ

ಸೋಮವಾರ, 21 ಏಪ್ರಿಲ್ 2014 (10:16 IST)
ಜಾತ್ಯಾತೀತ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಬಾಲಿವುಡ್‌ನ ಕೆಲವು ಕಲಾವಿದರು ಇತ್ತೀಚಿಗೆ ಕರೆ ನೀಡಿದ್ದರು, ಈಗ ವಿವೇಕ ಒಬೆರಾಯ್, ಮಧುರ್ ಭಂಡಾರಕರ್ ಸಮೇತ ಕೆಲವು ಕಲಾವಿದರು ನರೇಂದ್ರ ಮೋದಿಗೆ ಸಮರ್ಥನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. 
 
'ಜಾತ್ಯತೀತ ಅಭ್ಯರ್ಥಿಗೆ ಮತ ನೀಡಿ ಎಂದು ಕೆಲವರು ಮನವಿ ಮಾಡಿರುವುದು, ನಾವು ಬಹಿರಂಗವಾಗಿ  ಮೋದಿ ಸಮರ್ಥನೆ ಮಾಡುವುದನ್ನು ಅನಿವಾರ್ಯವಾಗಿಸಿತು' ಎಂದು ಭಂಡಾರ್ಕರ್ ಹೇಳಿದ್ದಾರೆ.  
'ಜಾತ್ಯಾತೀತ ವ್ಯಕ್ತಿಗೆ, ಮತ  ನೀಡಿ' ಎಂದು ಬಾಲಿವುಡ್ ನಟರಾದ ಅಂಜುಂ ರಾಜ್‌ಬಾಲಿ ಮನವಿ ಮಾಡಿದ್ದರು. ಅದನ್ನು  ಮಹೇಶ್ ಭಟ್, ನಂದಿತಾ ದಾಸ್, ಜೋಯಾ ಅಖ್ತರ್, ಕಬೀರ್ ಖಾನ್, ಇಮ್ತಿಯಾಜ್ ಆಲಿ, ವಿಜಯ್ ಕೃಷ್ಣ ಆಚಾರ್ಯ, ಗಾಯಕ ಶುಭಾ ಮುದ್ಗಲ್ ಮತ್ತು ಇತರರು ಬೆಂಬಲಿಸಿದ್ದರು. 
 
'ಭ್ರಷ್ಟಾಚಾರ ಮತ್ತು ಉತ್ತಮ ಆಡಳಿತ ಸಹ ಪ್ರಮುಖ ಸಮಸ್ಯೆಗಳಾಗಿರಬಹುದು, ಆದರೆ ದೇಶದ ಜಾತ್ಯತೀತ ಚರಿತ್ರೆಯ ವಿರುದ್ಧ ನಡೆಯಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದರು. 
 
ಪ್ರತಿಯಾಗಿ ವಿವೇಕ್ ಒಬೆರಾಯ್, ಮಧುರ್ ಭಂಡಾರ್ಕರ್, ಚಿತ್ರನಿರ್ಮಾಪಕ ವಿವೇಕ್ ಅಗ್ನಿಹೋತ್ರಿ, ಅಶೋಕ್ ಪಂಡಿತ್, ಡಿಸೈನರ್ ವಿಕ್ರಮ್ ಫಡನೀಸ್ , ಬಾಲಿವುಡ್ ತಾರೆಯರ ವಕೀಲ ಸತೀಶ್ ಮಾನೆ - ಶಿಂಧೆ ಮತ್ತು  ಇತರರು ಮೋದಿ ಪರವಾಗಿ ತಮ್ಮ ಬೆಂಬಲವನ್ನು ಘೋಷಿಸಿದರು.
 
"ರಾಜ್‌ಬಾಲಿ ಮತ್ತು ಇತರರು ಹೇಳಿದ್ದು ತಪ್ಪು. ಯಾರಿಗೆ ಮತ  ನೀಡಬೇಕು ಎಂದು ಜನರು ನಿರ್ಧರಿಸುವುದಕ್ಕೆ ಅವಕಾಶ ಕೊಡಿ. ಜನರಿಗೆ ಇಂತಹ ಮಾತುಗಳನ್ನು ಹೇಳಲು ನಿಮಗೆ ಯಾವ ಅಧಿಕಾರವಿದೆ?" ಎಂದು ಭಂಡಾರ್ಕರ್ ಅವರು ಪ್ರಶ್ನಿಸಿದ್ದಾರೆ 
 

ವೆಬ್ದುನಿಯಾವನ್ನು ಓದಿ