Publish Date: Mon, 21 Apr 2014 (13:17 IST)
Updated Date: Wed, 26 Jun 2019 (12:25 IST)
ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.
ಕಲ್ಲಿದ್ದಲು ನಗರ ಧನಬಾದ್‌ನಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿಯವರ ಮೇಲೆ ಹರಿಹಾಯ್ದರು. "ಮೋದಿ ಕಾ ಕೋಯಿ ಲೆಹರ್ ನಹೀಂ ಹೈ, ಮೋದಿ ಕಾ ಜೆಹರ್ ಹೈ"( ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ) ಎಂದು ರಮೇಶ್ ಟೀಕಿಸಿದರು.
ಧನಬಾದ್‌ನಿಂದ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಅಜಯ್ ದುಬೆ ಪರ ಪ್ರಚಾರ ಕೈಗೊಂಡಿದ್ದ ಅವರು ರಾಜ್ಯದ ಅತಿ ಕೆಟ್ಟ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸರಂದಾ ಕಾಡಿನಲ್ಲಿ ಮತದಾನದ ಪ್ರಮಾಣ ಶೇಕಡಾವಾರು ಹೆಚ್ಚಳವಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
"ಈ ಹಿಂದೆ ಜನರು ತಮ್ಮ ಮತ ಚಲಾಯಿಸಲು ಹೊರಬರುತ್ತಿರಲಿಲ್ಲ . ಈ ಬಾರಿ ಅಲ್ಲಿ ಪ್ರತಿಶತ 70 ರಷ್ಟು ಮತದಾನವಾಗಿದೆ " ಎಂದು ಅವರು ಹೇಳಿದರು.
ರಮೇಶ್ ಸಹ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಪಿ ಎನ್ ಸಿಂಗ್ ವಿರುದ್ಧ ದಾಳಿ ನಡೆಸಿದ ಅವರು "ನಾನು ಸಂಸತ್ತಿನಲ್ಲಿ ಅಡಿಕೆ ತಿನ್ನುವ ಸಿಂಗ್‌ರನ್ನು ಮಾತ್ರ ನೋಡಿದ್ದೇನೆ. ಅವರು ಒಂದು ಪ್ರಶ್ನೆ ಕೇಳುವುದಿಲ್ಲ" ಎಂದು ಮೂದಲಿಸಿದರು.