ಮುಂಬೈ: ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್ ನಲ್ಲಿ ಉದ್ಯಮಿ ನೀತಾ ಅಂಬಾನಿಗೆ ನಿಮ್ಮ ಗಂಡ ಮುಕೇಶ್ ಮತ್ತು ಪ್ರಧಾನಿ ಮೋದಿ ನಡುವೆ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ಅವರ ಉತ್ತರವೇನು ಗೊತ್ತಾ?
ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಧಾನಿ ಮೋದಿಗೆ ಅಂಬಾನಿ ಕುಟುಂಬದ ಜೊತೆ ಉತ್ತಮ ಸ್ನೇಹ ಸಂಬಂಧವಿದೆ. ಹಾರ್ವರ್ಡ್ ಇಂಡಿಯಾ ಸಮಾವೇಶನದಲ್ಲಿ ನೀತಾ ಅಂಬಾನಿಯನ್ನು ಸಂದರ್ಶನ ಮಾಡಲಾಯಿತು. ಈ ವೇಳೆ ಅವರಿಗೆ ಇಂತಹದ್ದೊಂದು ಕಠಿಣ ಪ್ರಶ್ನೆ ಕೇಳಲಾಗಿದೆ.
ರಾಪಿಡ್ ಫಯರ್ ವೇಳೆ ಮೋದಿಜಿ ಅಥವಾ ಮುಕೇಶ್ ಅಂಬಾನಿ ಇಬ್ಬರ ನಡುವೆ ಒಬ್ಬರನ್ನು ಆಯ್ಕೆ ಮಾಡಿ ಎಂದು ನೀತಾ ಅಂಬಾನಿಗೆ ಕೇಳಲಾಯಿತು. ಇದಕ್ಕೆ ಅವರು ದೇಶಕ್ಕೆ ಮೋದಿ ಇದ್ದರೆ ಒಳ್ಳೆಯದು, ಕುಟುಂಬದ ವಿಚಾರಕ್ಕೆ ಬಂದರೆ ಮುಕೇಶ್ ಬೆಸ್ಟ್ ಎಂದಿದ್ದಾರೆ.
ನೀತಾ ಇಂತಹದ್ದೊಂದು ಉತ್ತರ ನೀಡುತ್ತಿದ್ದಂತೇ ಸಭಿಕರಿಂದ ಭಾರೀ ನಗು, ಚಪ್ಪಾಳೆ ಕಂಡುಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷಟು ಜನ ಕಾಮೆಂಟ್ ಮಾಡಿದ್ದಾರೆ.