Select Your Language

Notifications

webdunia
webdunia
webdunia
webdunia

ಕೇರಳದ 56 ಕಡೆ NIA ದಾಳಿ!

ಕೇರಳದ 56 ಕಡೆ NIA ದಾಳಿ!
ತಿರುವನಂತಪುರಂ , ಗುರುವಾರ, 29 ಡಿಸೆಂಬರ್ 2022 (11:42 IST)
ತಿರುವನಂತಪುರಂ : ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಂಬಂಧಿಸಿದ ಕೇರಳದ 56 ಕಡೆಗಳಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ.
 
ಕೇರಳದ ಹಲವಾರು ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ಆಲಪ್ಪುಳ ಹಾಗೂ ಮಲಪ್ಪುರಂನಲ್ಲಿ ಎನ್ಐಎ ರೇಡ್ ನಡೆಸಿದೆ.

ಎರ್ನಾಕುಲಂನಲ್ಲಿ 8 ಕಡೆ, ಅಲಪ್ಪುಳ ಹಾಗೂ ಮಲಪ್ಪುರಂನಲ್ಲಿ 4 ಕಡೆ ಹಾಗೂ ತಿರುವನಂತಪುರಂನಲ್ಲಿ 3 ಕಡೆ ಏಜೆನ್ಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಎನ್ಐಎ ಇತ್ತೀಚೆಗೆ ಕೇರಳದ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಪಿಎಫ್ಐನ ಹಿರಿಯ ಸದಸ್ಯರು ವಿವಿಧ ಮಾಧ್ಯಮಗಳ ಮೂಲಕ ಅಲ್ ಖೈದಾದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ರಹಸ್ಯ ಶಾಖೆಗಳನ್ನೂ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ತೀರಕ್ಕೆ ಪ್ರವಾಸಿಗರ ದಂಡು