ನರೇಗಾ ಯೋಜನೆಯ ಹೆಸರು ಬದಲಾವಣೆಗೆ ಹೊಸ ಮಸೂದೆ: ರಾಜಕೀಯ ಸಂಘರ್ಷಕ್ಕೆ ವೇದಿಕೆ ಸಜ್ಜು

Sampriya
ಸೋಮವಾರ, 15 ಡಿಸೆಂಬರ್ 2025 (14:19 IST)
Photo Credit X
ನವದೆಹಲಿ: ಪಾರ್ಲಿಮೆಂಟ್‌ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿನರೇಗಾ) ಬದಲಿಗೆ ಮಸೂದೆಯನ್ನು ಪರಿಚಯಿಸಿದೆ. 

2005 ರಲ್ಲಿ ಅಂದಿನ ಮನಮೋಹನ್‌ ಸಿಂಗ್‌ ಅವರ ಯುಪಿಎ ಸರ್ಕಾರವು ನರೇಗಾ ಜಾರಿಗೆ ತಂದಿತ್ತು. 2009ರಲ್ಲಿ  ಎಂಜಿನರೇಗಾ ಎಂದು ಮರುನಾಮಕರಣ ಮಾಡಲಾಯಿತ್ತು. ಇದೀಗ ಮೂರನೇ ಬಾರಿ ಯೋಜನೆಯ ಹೆಸರು ಬದಲಾವಣೆಗೆ ಸಿದ್ಧತೆ ನಡೆದಿದೆ.

ಕೇಂದ್ರ ಸರ್ಕಾರವು ಈ ಹೊಸ ಮಸೂದೆಯನ್ನು ದಿ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್' ಎಂದು ಕರೆಯಲಾಗುತ್ತದೆ. ಇದನ್ನು ಸಂಕ್ಷಿಪ್ತವಾಗಿ ವಿಬಿ ಜಿ ರಾಮ್ ಜಿ ಎಂದು ಕರೆಯಲಾಗುತ್ತದೆ. ಮಸೂದೆ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸಂಸದರು ಸಂಸತ್ತಿಗೆ ಹಾಜರಾಗುವಂತೆ ವಿಪ್ ಹೊರಡಿಸಲಾಗಿದೆ. ಇದು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಲಿದೆ.

ಈ ಹೊಸ ಮಸೂದೆಯು ವಿಕಸಿತ ಭಾರತ 2047 ಯೋಜನೆಗೆ ಹೊಸ ಚೌಕಟ್ಟು ಒದಗಿಸಲಿದೆ. ಎಂಜಿನರೇಗಾ ಯೋಜನೆಯನ್ನು 2005ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಇದು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಮಸೂದೆಯಂತೆ 100 ದಿನಗಳ ಖಾತರಿಯನ್ನು 125 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಕೆಲಸ ಮುಗಿದ ಒಂದು ವಾರದೊಳಗೆ ಅಥವಾ 15 ದಿನಗಳ ಒಳಗೆ ಪಾವತಿಗಳನ್ನು ಮಾಡಬೇಕೆಂದು ಸಹ ಇದು ಪ್ರಸ್ತಾಪಿಸುತ್ತದೆ. ಗಡುವಿನೊಳಗೆ ಪಾವತಿಗಳನ್ನು ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಸಹ ಅವಕಾಶವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

25 ಪ್ರಕರಣಗಳಲ್ಲಿ ನ್ಯಾಯಾಲಯದ ವಾರೆಂಟ್ ತಪ್ಪಿಸಿ ಪರಾರಿಯಾಗಿದ್ದವ ಕೊನೆಗೂ ಅರೆಸ್ಟ್‌

MGNREGA ಮರುನಾಮಕರಣದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಕಿಡಿ, ನಾಳೆಯಿಂದ ಪ್ರತಿಭಟನೆ

ದಿಡೀರನೆ ದೆಹಲಿ ಜನತೆ ಬಳಿ ಕ್ಷಮೆಯಾಚಿಸಿದ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಸಿಡ್ನಿ ಗುಂಡಿನ ದಾಳಿಕೋರರಲ್ಲಿ ಒಬ್ಬಾತ ಹೈದರಾಬಾದ್‌ ಮೂಲದವ, ಇಲ್ಲಿದೆ ಮಾಹಿತಿ

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಧಾಂದಲೆ: ಪ.ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments