Select Your Language

Notifications

webdunia
webdunia
webdunia
webdunia

ಇನ್ಮುಂದೆ ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಬಂದ್!

ಇನ್ಮುಂದೆ ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಬಂದ್!
ನವದೆಹಲಿ , ಗುರುವಾರ, 3 ಆಗಸ್ಟ್ 2023 (12:56 IST)
ನವದೆಹಲಿ : ಇನ್ಮುಂದೆ ಭಾರತದಲ್ಲಿ ಪಾಸ್ವರ್ಡ್ ಹಂಚಿಕೆ ಮಾಡಿಕೊಳ್ಳುವುದನ್ನ ಕೊನೆಗೊಳಿಸಿರುವುದಾಗಿ ನೆಟ್ಫ್ಲಿಕ್ಸ್ ಗುರುವಾರ ಘೋಷಿಸಿದೆ. ನೆಟ್ಫ್ಲಿಕ್ಸ್ ಒಂದು ಖಾತೆಯನ್ನ ಒಂದು ಕುಟುಂಬದವರು ಬಳಕೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದೆ.

ಕಳೆದ ವರ್ಷ ನೆಟ್ಫ್ಲಿಕ್ಸ್ ಹೆಚ್ಚಿನ ಚಂದಾದಾರನ್ನ ಕಳೆದುಕೊಂಡ ನಂತರ ಕಂಪನಿಯ ಆದಾಯ ಹೆಚ್ಚಿಸುವ ಸಲುವಾಗಿ ಈ ಪ್ರಯತ್ನಕ್ಕೆ ಮುಂದಾಗಿದೆ. ಅದರಂತೆ ಭಾರತದಲ್ಲಿ ಪಾಸ್ವರ್ಡ್ ಹಂಚಿಕೆ ಮಾಡಿಕೊಳ್ಳುವುದನ್ನ ನಿಷೇಧಿಸಿದೆ. ಇದರಿಂದಾಗಿ ನೆಟ್ಫ್ಲಿಕ್ಸ್ ಖಾತೆಯು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಆ ಪಾಸ್ವರ್ಡ್ ಅನ್ನು ಮತ್ತೊಬ್ಬರು ಬಳಸಲು ಪ್ರಯತ್ನಿಸಿದರೆ ಮುಂದೆ ಅವಕಾಶ ನೀಡುವುದಿಲ್ಲ.

ಕಂಪನಿಯ ಪ್ರಕಾರ, ಒಂದು ಖಾತೆಯನ್ನು ಒಂದು ಮನೆಯಲ್ಲಿ ಮಾತ್ರ ಬಳಸಬೇಕು. ಜೊತೆಗೆ ಪ್ರೊಫೈಲ್ ವರ್ಗಾವಣೆಯ ಪ್ರಯೋಜನವನ್ನೂ ಪಡೆಯಬಹುದು ಎಂದು ಹೇಳಿದೆ. ಈ ಹಿಂದೆ ನೆಟ್ಫ್ಲಿಕ್ಸ್ ಭಾರತದ ಹೊರಗೆ ಪಾಸ್ವರ್ಡ್ ಹಂಚಿಕೆಯನ್ನ ನಿಷೇಧಿಸಿತ್ತು. ಆದ್ರೆ ಪಾಸ್ವರ್ಡ್ ಶೇರಿಂಗ್ ನಿಷೇಧಿಸಿದ ನಂತರ ಚಂದಾದಾರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.

ಈಗಾಗಲೇ ನೆಟ್ಫ್ಲಿಕ್ಸ್ ಪಾಸ್ವರ್ಡ್ ಹಂಚಿಕೊಳ್ಳುವವರಿಗೆ ಇ-ಮೇಲ್ ಕಳುಹಿಸಲು ಪ್ರಾರಂಭಿಸಿದ್ದೇವೆ. ನಮ್ಮ ಚಂದಾದಾರಿಗೆ ವಿವಿಧ ಮನರಂಜನಾ ಆಯ್ಕೆಗಳನ್ನು ನೀಡಲು ಹೊಸ ಪ್ರಯತ್ನಗಳು ನಡೆದಿದೆ. ವಿವಿಧ ರೀತಿಯ ಹೊಸ ಸಿನಿಮಾಗಳು, ಟಿವಿ ಶೋಗಳಲ್ಲಿ ಹೂಡಿಕೆ ಮುಂದುವರಿಸಿದ್ದೇವೆ ಎಂದೂ ಕಂಪನಿ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದೇನಿದು ಇಷ್ಟೊಂದು ಹೀನಾಯ : ಬಾಲಕಿಗೆ ಲೈಂಗಿಕ ಕಿರುಕುಳ, ಸ್ಯಾನಿಟೈಸರ್ ಕುಡಿಸಿ ಹತ್ಯೆಗೈದ ಪುಂಡರ ಗುಂಪು!