Publish Date: Fri, 16 Apr 2021 (08:55 IST)
Updated Date: Fri, 16 Apr 2021 (08:57 IST)
ಲೂಧಿಯಾನ : ಪಂಜಾಬ್ ನ ಲೂಧಿಯಾನದಲ್ಲಿ ಮಹಿಳೆಯೊಬ್ಬಳು ತನ್ನ 16 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 45 ವರ್ಷದ ನೆರೆಮನೆಯಾತ ಮತ್ತು ಆತನ 22 ವರ್ಷದ ಮಗನ ವಿರುದ್ಧ ದೂರು ದಾಖಲಿಸಿದ್ದಾಳೆ.
ಮಹಿಳೆ ನೆರೆಮನೆಯಾತನಿಗೆ 10ಸಾವಿರ ರೂ ಸಾಲ ನೀಡಬೇಕಿತ್ತು. ಆದರೆ ಆಕೆಗೆ ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಮನೆಗೆ ನುಗ್ಗಿದ ನೆರೆಮನೆಯಾತ ಮತ್ತು ಆತನ ಮಗ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಅವರು ತಿಳಿಸಿದ್ದಾರೆ ಎನ್ನಲಾಗಿದೆ.