Select Your Language

Notifications

webdunia
webdunia
webdunia
webdunia

ಬೀದಿ ನಾಯಿಗೆ ಆಹಾರ ನೀಡಿದ್ದಕ್ಕೆ ನೆರೆಮನೆಯಾತ ಮಹಿಳಾ ಲೆಕ್ಚರ್ ಗೆ ಹೀಗಾ ಮಾಡೋದು?

webdunia
ಕೋಲ್ಕತ್ತಾ , ಶನಿವಾರ, 5 ಡಿಸೆಂಬರ್ 2020 (07:12 IST)
ಕೋಲ್ಕತ್ತಾ : ಕೋಲ್ಕತ್ತಾದ ಹೆಸರಾಂತ ಕಾಲೇಜೊಂದರಲ್ಲಿ ಇತಿಹಾಸ ಲೆಕ್ಚರ್ ಆಗಿದ್ದ 40 ವರ್ಷದ ಮಹಿಳೆ ಯನ್ನು ನೆರೆಮನೆಯ 45 ವರ್ಷದ ವ್ಯಕ್ತಿ ತೀಕ್ಷ್ಣವಾದ ವಸ್ತುವನ್ನ ಬಳಸಿ ಹಲ್ಲೆ ಮಾಡಿದ ಘಟನೆ  ನಡೆದಿದೆ.

ಮಹಿಳೆ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಹಿನ್ನಲೆಯಲ್ಲಿ ನೆರೆಮಮನೆಯಾತ ಈ ರೀತಿ ಬೀದಿ ನಾಯಿಗಳಿಗೆ ಆಹಾರ ನೀಡಿದರೆ ಬೀದಿ ಗಲೀಜಾಗುತ್ತದೆ ಮತ್ತು ನಾಯಿಗಳು ಇತರರಿಗೆ ತೊಂದರೆ ಕೊಡುತ್ತವೆ ಎಂದು ಕಿಡಿಕಾರಿದ್ದಾನೆ.  ಇದರಿಂದ ಅವರಿಬ್ಬರ ನಡುವೆ ಜಗಳ ನಡೆದು ಆ ವೇಳೆ ತೀಕ್ಷ್ಣವಾದ ವಸ್ತುವಿನಿಂದ  ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಈ ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪೊಲೀಸರು ನೆರೆಮನೆಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪೈಲೆಟ್ ಅರೆಸ್ಟ್