Select Your Language

Notifications

webdunia
webdunia
webdunia
Thursday, 17 April 2025
webdunia

ನಾಯಿ ಬೊಗಳಿದ್ದಕ್ಕೆ ನಾಯಿ ಮಾಲೀಕನಿಗೆ ಮೂವರು ಸೇರಿ ಮಾಡಿದ್ದೇನು ಗೊತ್ತಾ?

ಲಕ್ನೋ
ಲಕ್ನೋ , ಬುಧವಾರ, 25 ನವೆಂಬರ್ 2020 (06:27 IST)
ಲಕ್ನೋ : ನಾಯಿ ಬೊಗಳಿದ್ದಕ್ಕೆ ಮೂವರು ಸೇರಿ ನಾಯಿಯ ಮಾಲೀಕನನ್ನು ಚಾಕುವಿನಿಂದ ಚುಚ್ಚಿ ಕೊಂದ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

ಸಚಿನ್ ಕುಮಾರ್ ಮೃತಪಟ್ಟ ವ್ಯಕ್ತಿ. ಉಮಾ, ರೋಹಿತ್, ಗೋವಿಂದ್ ಕೊಂದ ಆರೋಪಿಗಳು. ಈತ ತನ್ನ ಸಾಕು ನಾಯಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಮೂವರು ಅವರನ್ನು ತಡೆದರು. ಆ ವೇಳೆ ನಾಯಿ ಅವರನ್ನು ಕಂಡು ಜೋರಾಗಿ ಬೊಗಳಿದೆ. ಇದರಿಂದ ಕೋಪಗೊಂಡ ಮೂವರು ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆ ವೇಳೆ ಅವನ ಸಹಾಯಕ್ಕಾಗಿ ಬಂದ ಇಬ್ಬರು ಸಹೋದರರ ಮೇಲೂ ಹಲ್ಲೆ ಮಾಡಿದ್ದಾರೆ.

ಬಳಿಕ ಸ್ಥಳೀಯರು ಧಾವಿಸಿದ್ದು, ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅದರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಫ್ಟ್ ವೇರ್ ಎಂಜಿನಿಯರ್ ನ್ನು ಜೀವಂತವಾಗಿ ಸುಟ್ಟ ಪತ್ನಿಯ ಕುಟುಂಬಸ್ಥರು