Select Your Language

Notifications

webdunia
webdunia
webdunia
webdunia

ನೀಟ್ ಯುಜಿ ಅಕ್ರಮ ಪ್ರಕರಣ: ಪಟ್ನಾದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ ತಂಡ

ನೀಟ್ ಯುಜಿ ಅಕ್ರಮ ಪ್ರಕರಣ: ಪಟ್ನಾದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ ತಂಡ

Sampriya

ನವದೆಹಲಿ , ಗುರುವಾರ, 27 ಜೂನ್ 2024 (16:30 IST)
Photo Courtesy X
ನವದೆಹಲಿ: ದೇಶದಲ್ಲೇ ಭಾರೀ ಸಂಚಲನ ಸೃಷ್ಟಿಸಿದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಇಬ್ಬರನ್ನು ಬಂಧಿಸಿದ್ದು, ಇದು ಪ್ರಕರಣದ ಮೊದಲ ಬಂಧನವಾಗಿದೆ.

 ‌ಪ್ರಕರಣ ಸಂಬಂಧ ಬಿಹಾರ ರಾಜಧಾನಿ ಪಟ್ನಾದಲ್ಲಿ ಇಬ್ಬರನ್ನು ಸಿಬಿಐ ಬಂಧಿಸಿದೆ.

ಬಂಧಿತರನ್ನು ಮನೀಶ್ ಕುಮಾರ್ ಮತ್ತು ಅಶುತೋಷ್ ಕುಮಾರ್ ಎಂದು ಗುರುತಿಸಲಾಗಿದೆ.  ಇಬ್ಬರೂ ಆರೋಪಿಗಳು ಪರೀಕ್ಷೆಯ ಮೊದಲು ಆಕಾಂಕ್ಷಿಗಳಿಗೆ ಸುರಕ್ಷಿತ ಆವರಣವನ್ನು ಒದಗಿಸಿ ಅವರಿಗೆ ಸೋರಿಕೆಯಾದ ಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.


ಆರೋಪಿಗಳನ್ನು ಹೆಚ್ಚಿನ ಪೊಲೀಸ್ ಕಸ್ಟಡಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಧಿಸಿದಂತೆ ಸಿಬಿಐ ಈವರೆಗೆ 6 ಎಫ್‌ಐಆರ್ ದಾಖಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾನಿಪುರಿ ತಿಂತಿದ್ದೀರಾ, ಹುಷಾರು ಇದರಿಂದ ಕ್ಯಾನ್ಸರ್ ಕೂಡಾ ಬರಬಹುದು