Select Your Language

Notifications

webdunia
webdunia
webdunia
webdunia

ಪಾನಿಪುರಿ ತಿಂತಿದ್ದೀರಾ, ಹುಷಾರು ಇದರಿಂದ ಕ್ಯಾನ್ಸರ್ ಕೂಡಾ ಬರಬಹುದು

ಪಾನಿಪುರಿ ತಿಂತಿದ್ದೀರಾ, ಹುಷಾರು ಇದರಿಂದ ಕ್ಯಾನ್ಸರ್ ಕೂಡಾ ಬರಬಹುದು

Sampriya

ಬೆಂಗಳೂರು , ಗುರುವಾರ, 27 ಜೂನ್ 2024 (15:38 IST)
Photo Courtesy X
ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಮತ್ತು ಕಬಾಬ್‌ ತಯಾರಿಕೆ ಕೃತಕ ಬಣ್ಣ ಬಳಕೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಇದೀಗ  ಪಾನಿಪುರಿ ಪ್ರಿಯರಿಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಶಾಕ್ ನೀಡಲಿದೆ.

ಪಾನಿಪುರಿಗೆ ಬಳಸುವ ಸಾಸ್​, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಇದೀಗ ಪಾನಿಪುರಿಗೆ ಬಳಸುವ ಕೆಲ ಸಾಮಗ್ರಿಗಳನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಸಂಬಂಧ ಈಗಾಗಲೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಪಾನಿಪುರಿ ತಯಾರಿಕೆಗೆ ಬಳಸುವ  ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನಡೆಸಿದ ಎಲ್ಲ ಮಾದರಿಗಳ ಫಲಿತಾಂಶ ಬಂದ್ಮೇಲೆ ಸಭೆ ನಡೆಸಿ ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಎಲ್‌ಕೆ ಅಡ್ವಾಣಿ ಡಿಸ್ಚಾರ್ಜ್‌