Select Your Language

Notifications

webdunia
webdunia
webdunia
webdunia

ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ಕೊನೆಗೂ ಕೊಂಚ ಸುಧಾರಣೆ: ಈಗ ಎಷ್ಟಿದೆ ಗೊತ್ತಾ

ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ಕೊನೆಗೂ ಕೊಂಚ ಸುಧಾರಣೆ: ಈಗ ಎಷ್ಟಿದೆ ಗೊತ್ತಾ

Sampriya

ನವದೆಹಲಿ , ಬುಧವಾರ, 4 ಡಿಸೆಂಬರ್ 2024 (14:39 IST)
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ನಿವಾಸಿಗಳಿಗೆ ಸಮಾಧಾನದ ಸುದ್ದಿ. ಅತ್ಯಂತ ಕಳಪೆ ಮಟ್ಟದಲ್ಲಿದ್ದ ಗಾಳಿಯ ಗುಣಮಟ್ಟ ಕೊಂಚ ಸುಧಾರಿಸಿದೆ. ಆದಾಗ್ಯೂ, ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಇನ್ನೂ ಕಳಪೆ ಮಟ್ಟದಲ್ಲೇ ಇದೆ.

ಇಂದು ಬೆಳಿಗ್ಗೆ 8ರ ಹೊತ್ತಿಗೆ ದೆಹಲಿ ಎಕ್ಯೂಐ 211ರಷ್ಟು ದಾಖಲಾಗಿದೆ. ಮಂಗಳವಾರ ಬೆಳಿಗ್ಗೆ 268ರಷ್ಟಿತ್ತು. ಸೋಮವಾರ  273ರಷ್ಟು ಹಾಗೂ ಭಾನುವಾರ 285ರಷ್ಟು ದಾಖಲಾಗಿತ್ತು ಎಂಬುದು ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಇದರೊಂದಿಗೆ ಸತತ ನಾಲ್ಕು ದಿನಗಳಿಂದ ವಾಯು ಗುಣಮಟ್ಟವು ಸುಧಾರಿಸಿದಂತಾಗಿದೆ. ದೆಹಲಿಯಲ್ಲಿರುವ 39 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 15ರಲ್ಲಿ ಎ‌ಕ್ಯೂಐ ಪ‍್ರಮಾಣವು ಸುಧಾರಣೆ ಕಂಡಿದೆ. ಇನ್ನುಳಿದ ಕೇಂದ್ರಗಳಲ್ಲಿ ಎ‌ಕ್ಯೂಐ ಪ‍್ರಮಾಣವು ಕಳಪೆ ಇದೆ ಎಂದು ಉಲ್ಲೇಖಿಸಲಾಗಿದೆ.

ದೆಹಲಿಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಎಕ್ಯೂಐ ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ ಉತ್ತಮ ಎಂದು, 51ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡಣವೀಸ್‌: ನಾಳೆಯೇ ಪ್ರಮಾಣ ವಚನ