Select Your Language

Notifications

webdunia
webdunia
webdunia
webdunia

ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು

ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು
ಅಸ್ಸಾಂ , ಶನಿವಾರ, 19 ಮಾರ್ಚ್ 2022 (07:27 IST)
ಡಿಸ್ಪುರ್ : ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ.

ಹೀಗಿರುವಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಅಸ್ಸಾಂ ಮೂಲದ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಹೆಸರಿಡಲಾಗಿದೆ.

ಭಾರತದ ಅಸ್ಸಾಂನ ಸ್ಟಾರ್ಟ್-ಅಪ್ ಕಂಪನಿಯೊಂದು ಉಕ್ರೇನ್ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಚಹಾ ಪುಡಿಗೆ ಅಧ್ಯಕ್ಷ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ.

ದೇಶಕ್ಕಾಗಿ ಹೋರಾಡುತ್ತಿರುವ ಉಕ್ರೇನ್ ಅಧ್ಯಕ್ಷರನ್ನು ತಮ್ಮದೇ ಆದ ರೀತಿಯಲ್ಲಿ ಗೌರವಿಸಲು ಈ ಸ್ಟಾರ್ಟಪ್ ನಿರ್ಧರಿಸಿದ್ದು, ಅವರ ಹೆಸರನ್ನು ಅವರ ಹೊಸ ಚಹಾಕ್ಕೆ ಇಟ್ಟಿದೆ. ಅಧ್ಯಕ್ಷರ ಶೌರ್ಯಕ್ಕೆ ಗೌರವವಾಗಿ ತನ್ನ ಚಹಾವನ್ನು ಝೆಲೆನ್ಸ್ಕಿ ಎಂದು ಹೆಸರಿಸಲು ಸ್ಟಾರ್ಟ್-ಅಪ್ ನಿರ್ಧರಿಸಿದೆ.

ರಷ್ಯಾದ ಆಕ್ರಮಣದ ವಿರುದ್ಧ ಕೊನೆಯ ಸೈನಿಕರು ಇರುವವರೆಗೆ ಹೋರಾಡಲು ಪ್ರತಿಜ್ಞೆ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರ ದೇಶವನ್ನು ಉಳಿಸಲು ಮಾಡುವ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಭರಣ ಪ್ರೀಯರಿಗಾಗಿ ಚಿನ್ನದ ಬೆಲೆಯ ವಿವರ