Select Your Language

Notifications

webdunia
webdunia
webdunia
webdunia

ನ್ಯೂ ಇಯರ್ ಆಫರ್! ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!

ನ್ಯೂ ಇಯರ್ ಆಫರ್! ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!
ಅಸ್ಸಾಂ , ಶುಕ್ರವಾರ, 31 ಡಿಸೆಂಬರ್ 2021 (07:02 IST)
ಡಿಸ್ಪುರ್ : ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ನೀಡುವ ಹಾಗೂ ಕಫ್ರ್ಯೂ ನಿಯಮಗಳ ಬಗ್ಗೆ ಕೇಳಿಬರುತ್ತಿದೆ.
 
ಆದರೆ ಅಸ್ಸಾಂನ ಬಿಸ್ವಂತ್ ಜಿಲ್ಲೆಯಲ್ಲಿ ಮಾತ್ರ ಹೊಸ ವರ್ಷಾಚರಣೆಗೆ ಉತ್ತೇಜನ ನೀಡುತ್ತಿದ್ದು, ಕುಡುಕರಿಗೆ ಹೊಸದೊಂದು ಸೌಲಭ್ಯವನ್ನೂ ಒದಗಿಸುತ್ತಿದೆ.

ಡ್ರಂಕ್ ಆಂಡ್ ಡ್ರೈವ್ ನಿಂದಾಗುವ ಅಪಘಾತಗಳನ್ನು ತಪ್ಪಿಸಲು ಅಸ್ಸಾಂನ ಬಿಸ್ವಂತ್ ಜಿಲ್ಲಾಡಳಿತ ಎರಡು ಸಹಾಯವಾಣಿಯನ್ನು ಸ್ಥಾಪಿಸಿದೆ. ಹೊಸವರ್ಷದಲ್ಲಿ ಮದ್ಯಪಾನ ಮಾಡಿದವರನ್ನು ಮನೆಗೆ ಬಿಡಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದೆ. ಹೊಸ ವರ್ಷದ ಕಾರ್ಯಕ್ರಮದಿಂದ ಕುಡುಕರನ್ನು ಅವರ ಮನೆಗಳಿಗೆ ಬಿಡಲು ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. 

ಅತಿಯಾದ ಮದ್ಯ ಸೇವನೆಯಿಂದ ಅಪಘಾತ ಸಂಭವಿಸಬಹುದು ಎಂದು ಭಾವಿಸುವ ಜನರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಡ್ರಾಪ್ ಹೋಮ್ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ವಾಹನಗಳನ್ನು ನಿಯೋಜಿಸಲಾಗಿದೆ. ಡಿಸೆಂಬರ್ 31ರಂದು ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ