Select Your Language

Notifications

webdunia
webdunia
webdunia
Monday, 7 April 2025
webdunia

ನ್ಯೂ ಇಯರ್‌ಗೆ ಹೊಸ ಮಾರ್ಗಸೂಚಿ ಬಿಡುಗಡೆ

ಸರ್ಕಾರ
ಚೆನ್ನೈ , ಬುಧವಾರ, 29 ಡಿಸೆಂಬರ್ 2021 (16:17 IST)
ಚೆನ್ನೈ : ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ಬೀಚ್ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆಯನ್ನು ನಿಷೇಧಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕಡಲತೀರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಆಚರಣೆಗಳನ್ನು ಅನುಮತಿಸಲಾಗುವುದಿಲ್ಲ. ಇದಲ್ಲದೆ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅನಾವಶ್ಯಕವಾಗಿ ಖಾಸಗಿ ವಾಹನಗಳನ್ನು ರೋಡಿಗೆ ಇಳಿಸಿದರೆ ಅಂತಹವರನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುವ ಎಚ್ಚರಿಕೆ ನೀಡಿದ್ದೇವೆ ಎಂದು ಡಿಜಿಪಿ ತಿಳಿಸಿದ್ದಾರೆ. 

ರೋಡ್ ರೇಜ್ ಪ್ರಕರಣಗಳಿಗೂ ಸಹ ಕಠಿಣ ಶಿಕ್ಷೆ ನೀಡಲಾಗುತ್ತದೆ. ಎಲ್ಲಾ ಹೋಟೆಲ್ಗಳು ಪ್ರಸ್ತುತ (ಎಸ್ಒಪಿ) ಅನ್ನು ಅನುಸರಿಸಬೇಕಾಗುತ್ತದೆ. ರಾತ್ರಿ 11 ಗಂಟೆಯೊಳಗೆ ಎಲ್ಲ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕಾಗುತ್ತದೆ.

ಹೊಸ ವರ್ಷದ ಆಚರಣೆಯ ಭಾಗವಾಗಿ ಖಾಸಗಿ ಪಾರ್ಟಿಗಳಿಗೂ ನಿರ್ಬಂಧಗಳು ಅನ್ವಯಿಸುತ್ತವೆ. ರಾಜ್ಯ ಆರೋಗ್ಯ ಸಚಿವರು ಈ ಹಿಂದೆ ಕುಟುಂಬಗಳೊಂದಿಗೆ ಮನೆಯಲ್ಲಿಯೇ ಹೊಸ ವರ್ಷವನ್ನು ಆಚರಿಸಿ ಎಂದು ಹೇಳಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್: ಧಾರಾವಾಹಿ ತಂದ ಅವಾಂತರ!