Publish Date: Tue, 25 Oct 2022 (12:00 IST)
Updated Date: Tue, 25 Oct 2022 (09:31 IST)
ಚಂಡೀಗಢ : ಮಹಿಳೆಯ ಬೆತ್ತಲೆ ದೇಹ ಸೂಟ್ಕೇಸ್ನಲ್ಲಿ ಪತ್ತೆಯಾಗಿರುವ ಘಟನೆ ಹರಿಯಾಣದ ಐಎಫ್ಎಫ್ಸಿಒ ಚೌಕ್ ಬಳಿ ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರ ಪ್ರಕಾರ ಮಹಿಳೆಯನ್ನು ರೇಪ್ ಮಾಡಿ ಬಳಿಕ ಸೂಟ್ಕೇಸ್ನಲ್ಲಿ ಹಾಕಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಈಗಾಗಲೇ ವೈದ್ಯರು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಸೂಟ್ಕೇಸ್ನಲ್ಲಿ ಉಸಿರು ಗಟ್ಟಿ ಸತ್ತಿರುವ ಕುರಿತು ತಿಳಿದುಬಂದಿದೆ. ರೇಪ್ ಮಾಡಿ ಈ ರೀತಿ ಕೃತ್ಯ ನಡೆಸಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಮಹಿಳೆಯ ದೇಹದಲ್ಲಿ ಸುಟ್ಟಿರುವ ಮತ್ತು ಗಾಯದ ಗುರುತುಗಳು ಪತ್ತೆಯಾಗಿದೆ.