Select Your Language

Notifications

webdunia
webdunia
webdunia
webdunia

ಇಂಧನ ಖರೀದಿಗೆ ಪಾಕ್ ಸಿದ್ಧ : ಇಶಾಕ್ ದಾರ್

ಇಂಧನ ಖರೀದಿಗೆ ಪಾಕ್ ಸಿದ್ಧ : ಇಶಾಕ್ ದಾರ್
ವಾಷಿಂಗ್ಟನ್ , ಮಂಗಳವಾರ, 25 ಅಕ್ಟೋಬರ್ 2022 (11:38 IST)
ವಾಷಿಂಗ್ಟನ್ : ನೆರೆಯ ಭಾರತಕ್ಕೆ ಒದಗಿಸುವ ದರದಲ್ಲಿ ರಷ್ಯಾದಿಂದ ಇಂಧನವನ್ನು ಖರೀದಿಸಲು ತಮ್ಮ ದೇಶ ಸಿದ್ಧವಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಹೇಳಿದ್ದಾರೆ.

ದೇಶದ ನೂತನ ಹಣಕಾಸು ಸಚಿವರಾಗಿರುವ ಇಶಾಕ್ ದಾರ್ ಅವರು ಅಮೆರಿಕಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.

ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹದಿಂದ ಸಂಕಷ್ಟ ಎದುರಾಗಿದ್ದರೂ ಪಾಶ್ಚಿಮಾತ್ಯ ದೇಶಗಳಿಂದ ರಿಯಾಯಿತಿ ದರದಲ್ಲಿ ಇಂಧನ ಆಮದು ಮಾಡಿಕೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಾನು ವಾಷಿಂಗ್ಟನ್ನಲ್ಲಿ 4 ದಿನಗಳ ವಾಸ್ತವ್ಯದ ಅವಧಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ಯುಎಸ್, ಸೌದಿ ಅರೇಬಿಯಾ ಮತ್ತು ಇತರ ದೇಶಗಳ ಅಧಿಕಾರಿಗಳೊಂದಿಗೆ 58 ಸಭೆಗಳನ್ನು ನಡೆಸಿದ್ದೇನೆ ಇಶಾಕ್ ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿಯೋದ?