ಮುಂಬೈ : ಮಹಾರಾಷ್ಟ್ರ ರಾಜ್ಯದ ಮಹತ್ವಾಕಾಂಕ್ಷೆಯ ಮುಂಬೈ- ನಾಗ್ಪುರ ಸಂಮೃದ್ಧಿ ಎಕ್ಸ್ಪ್ರೆಸ್ನಲ್ಲಿ ಸಂಚರಿಸುವ ವಾಹನಗಳಿಗೆ ಗಂಟೆಗೆ 120 ಕಿ.ಮೀ ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ.
701 ಕಿ.ಮೀ ಉದ್ದದ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಿಂದಿನ ಯೋಜನೆಯಂತೆ, ಈ ಹೆದ್ದಾರಿಯನ್ನು ಡಿಸೆಂಬರ್ 2021 ರಲ್ಲೇ ಲೋಕಾರ್ಪಣೆಯಾಗಬೇಕಿತ್ತು.
ಆದರೆ ವಿವಿಧ ಕಾರಣಗಳಿಂದ ಉದ್ಘಾಟನೆ ವಿಳಂಬವಾಗುತ್ತಿದೆ. ಇದೀಗ ಮಹಾರಾಷ್ಟ್ರ ಸರ್ಕಾರದಿಂದ ವೇಗದ ಮಿತಿ ನಿಗದಿ ಮಾಡಿದ್ದು, ಶೀಘ್ರವೇ ಈ ರಸ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಈ ಹೆದ್ದಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿರ್ಮಿಸಿದೆ. 150 kmph ವೇಗದ ಮಿತಿಯೊಂದಿಗೆ ಹೆದ್ದಾರಿಯ ಮಾನದಂಡಗಳ ಪ್ರಕಾರ, ಅವಶ್ಯಕತೆಗಳನ್ನು ಪೂರೈಸಲಾಗಿದೆ.