ತಲೆ ಕೂದಲು ಕಟ್ ಮಾಡ್ಸು ಎಂದ ಪ್ರೊಫೆಸರ್ ಗೆ ಚೂರಿಯಿಂದ ಇರಿದ ವಿದ್ಯಾರ್ಥಿ

Webdunia
ಶನಿವಾರ, 7 ಅಕ್ಟೋಬರ್ 2017 (19:17 IST)
ಮುಂಬೈ: ತಲೆ ಕೂದಲು ಕಟ್ ಮಾಡುವ ವಿಚಾರವಾಗಿ ಬುದ್ಧಿ ಹೇಳಿದಕ್ಕೆ ಕೋಪಗೊಂಡ ವಿದ್ಯಾರ್ಥಿ ಇಬ್ಬರು ಪ್ರೊಫೆಸರ್ ಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಜೋಗೇಶ್ವರಿ ಮಾತಾ ಸೆಕೆಂಡರಿ ಮತ್ತು ಜೂನಿಯರ್ ಕಾಲೇಜಿನಲ್ಲಿ ನಡೆದಿದೆ.
ಹಲ್ಲೆ ಮಾಡಿದ ವಿದ್ಯಾರ್ಥಿ ಸುನಿಲ್ ಭೋರ್

ಪ್ರೊಫೆಸರ್ ಗಳಾದ ಧನಂಜಯ್ ಅಬ್ನಾವೆ ಮತ್ತು ದರ್ಶನ್ ಚೌಧರಿ ಹಲ್ಲೆಗೊಳಗಾಗಿದ್ದು, ವಘೋಲಿಯಲ್ಲಿರುವ ಐಮ್ಯಾಕ್ಸ್ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ವಿದ್ಯಾರ್ಥಿ ಸುನಿಲ್ ಭೋರ್ ತಲೆ ಮರೆಸಿಕೊಂಡಿದ್ದಾನೆ.

ನಿನ್ನೆ ಕಾಲೇಜಿನಲ್ಲಿ ತರಗತಿ ನಡೆಯುವ ಸಂದರ್ಭದಲ್ಲಿ ಪ್ರೊ.ಧನಂಜಯ್, ತಲೆ ಕೂದಲನ್ನು ಸರಿಯಾಗಿ ಕಟ್ ಮಾಡಿಸು. ಕ್ಲಾಸ್ ನಲ್ಲಿ ಟೋಪಿ ಹಾಕಬೇಡ. ಶಿಸ್ತಿನಿಂದ ವರ್ತಿಸು ಎಂದು ಸುನಿಲ್ ಗೆ ಹೇಳಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಸುನಿಲ್, ಧನಂಜಯ್ ಗೆ ಚಾಕುವಿನಿಂದ ಇರಿದಿದ್ದಾನೆ. ಧನಂಜಯ್ ಗೆ ತಲೆ, ಕುತ್ತಿಗೆ, ಕೈಗಳು,  ಹಾಗೂ ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ. ಇದನ್ನು ಕಂಡು ಬಿಡಿಸಲು ಹೋದ ದರ್ಶನ್ ಮೇಲೂ ಅಟ್ಯಾಕ್ ಮಾಡಿದ್ದು, ಹಣೆ ಮತ್ತು ಕೈಗಳಿಗೆ ಗಾಯವಾಗಿದೆ.

ಸುನಿಲ್ ಭೋರ್ ಈ ಹಿಂದೆಯೂ ಅಶಿಸ್ತಿನಿಂದ ವರ್ತಿಸಿದ್ದು, ಕಾಲೇಜಿನಿಂದ ದೂರು ಬಂದಿತ್ತು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ಘಟನೆ ನಡೆದಿದೆ ಎಂದು ಆರೋಪಿ ಸುನಿಲ್ ತಂದೆ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನಿಖಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಸುನಿಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್: ಮಾಧ್ಯಮಗಳ ಪ್ರಶ್ನೆಗೆ ಸಿಎಂ ಏನು ಹೇಳಿದ್ರು

ಕೆಲವರು ಮುಳುಗುವುದಕ್ಕೆ ಪ್ರಾಕ್ಟೀಸ್ ಮಾಡ್ತಿದ್ದಾರೆ: ರಾಹುಲ್ ಗಾಂಧಿಗೆ ಮೋದಿ ಟಾಂಗ್

ರಾಷ್ಟ್ರಪತಿ ಜೊತೆ ವಿ ಸೋಮಣ್ಣ ಸೌತ್ ಆಫ್ರಿಕಾ ಪ್ರವಾಸ: ಮೋದಿಗೆ ಥ್ಯಾಂಕ್ಸ್ ಹೇಳಿದ ಸಚಿವ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕಬ್ಬು ಬೆಳೆಗಾರರ ಸಂಧಾನದ ಬಳಿಕ ಸ್ವೀಟ್ ಹಂಚಿ ಸಂಭ್ರಮಿಸಿದ ವಿಜಯೇಂದ್ರ

ಮುಂದಿನ ಸುದ್ದಿ
Show comments