Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವೆಂದು ತೊಟ್ಟಿಗೆ ಎಸೆದ ತಾಯಿ!

ಹೆಣ್ಣು ಮಗುವೆಂದು ತೊಟ್ಟಿಗೆ ಎಸೆದ ತಾಯಿ!
ಮಹಾರಾಷ್ಟ್ರ , ಮಂಗಳವಾರ, 7 ಡಿಸೆಂಬರ್ 2021 (09:31 IST)
ಮುಂಬೈ : ಗಂಡು ಮಗುವಿಗಾಗಿ ಪತಿ ಮತ್ತು ಅತ್ತೆ ನೀಡುತ್ತಿದ್ದ ನಿರಂತರ ಕಿರುಕುಳ ತಾಳಲಾರದೆ ಮಹಿಳೆಯೊಬ್ಬಳು ತನ್ನ ಮೂರು ತಿಂಗಳ ಮಗಳನ್ನು ನೀರಿನ ತೊಟ್ಟಿನಲ್ಲಿ ಮುಳುಗಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಧ್ಯ ಮುಂಬೈನ ಕಲಾಚೌಕಿ ಪ್ರದೇಶದ ಸಂಘರ್ಷ ಸದನ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ತನ್ನ ಮಗುವನ್ನು ಅಪರಿಚಿತ ಮಹಿಳೆಯೊಬ್ಬರು ಮನೆಗೆ ಬಂದು ಅಪಹರಿಸಿದ್ದಾರೆ ಎಂದು 36 ವರ್ಷದ ಮಗುವಿನ ತಾಯಿಯು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು.
ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣದ ಎಫ್ಐಆರ್ ದಾಖಲಿಸಿದ್ದರು. ಅಷ್ಟೇ ಅಲ್ಲದೇ ಆರೋಪಿ ತಾಯಿಯು ಅಪಹರಣ ಮಾಡಿದ್ದ ಮಹಿಳೆಯ ರೇಖಾಚಿತ್ರವನ್ನು ನೀಡಿ ಹೋಗಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಈ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು.
ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಗುರುವಾರ ಅಪರಾಧ ವಿಭಾಗದ ತಂಡ ದೂರುದಾರರಿಗೆ ಮತ್ತು ಆಕೆಯ ಪತಿಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಹೆಚ್ಚಿನ ತನಿಖೆಯಿಂದಾಗಿ ತಾಯಿಯೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತನಿಖೆ ವೇಳೆ ಮನೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಮಗುವನ್ನು ಎಸೆದಿರುವುದು ಬಹಿರಂಗವಾಗಿದೆ. ಈ ಸಂಬಂಧ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಪಿಜ್ಜಾ ಮೋಹ: 6 ತಿಂಗಳ ಮಗುವನ್ನು ಜಜ್ಜಿಕೊಂದ ತಂದೆ!