ಬೆಂಗಳೂರು: ಯುವತಿಯರ ಅಶ್ಲೀಲ ವಿಡಿಯೋಗಳನ್ನು ಕದ್ದುಮುಚ್ಚಿ ಮಾಡುತ್ತಿದ್ದ ನಾಲ್ವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಮಾಡಿದ ಬಳಿಕ ಅದನ್ನು ತನಗೆ ನೀಡುವಂತೆ ಮೂವರು ಯುವಕರು ಮತ್ತು ಓರ್ವನ ನಡುವೆ ಕಿತ್ತಾಟ ನಡೆದಿದೆ. ಈ ಸಂಬಂಧ ನಾಲ್ವರೂ ಆರೋಪಿಗಳನ್ನು ಬಂಧಿಸಲಾಗಿದೆ.
ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಈ ನಾಲ್ವರು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಹಣ ಸಂಪಾದನೆಗಾಗಿ ಈ ಯುವಕರು ಈ ದಂಧೆಗಿಳಿದಿದ್ದರು ಎನ್ನಲಾಗಿದೆ.