ಬೆಂಗಳೂರು: ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಸ್ನೇಹಿತರ ಸಹಾಯದೊಂದಿಗೆ ಪುತ್ರಿಯೇ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.
48 ವರ್ಷದ ದೀಪಕ್ ಕುಮಾರ್ ಸಿಂಗ್ ಕೊಲೆಗೀಡಾದ ತಂದೆ. ಈತ ಪ್ರತಿನಿತ್ಯ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ತಂದೆ ಈ ಕೃತ್ಯ ನಡೆಸುತ್ತಿದ್ದ. ಈ ಬಗ್ಗೆ ತಂದೆ-ತಾಯಿಯ ನಡುವೆ ಪ್ರತಿನಿತ್ಯ ಕಲಹವಾಗುತ್ತಿತ್ತು. ಇದರಿಂದ ಬೇಸತ್ತ ಪುತ್ರಿ ತನ್ನ ಸ್ನೇಹಿತರೊಂದಿಗೆ ತಂದೆಯ ಕತೆ ಮುಗಿಸಿದ್ದಾಳೆ.
ಇದೀಗ ಪೊಲೀಸರು ಪುತ್ರಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಆಕೆಯ ನಾಲ್ವರು ಸ್ನೇಹಿತರನ್ನು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಶೋಧ ಮುಂದುವರಿದಿದೆ.