Select Your Language

Notifications

webdunia
webdunia
webdunia
webdunia

ನಾಲ್ಕು ಬಾರಿ ಮದುವೆ, ಅಶ್ಲೀಲ ವಿಡಿಯೋ ಚಾಳಿ: ಕೋಲ್ಕೊತ್ತಾ ವೈದ್ಯೆಯ ರೇಪ್ ಮಾಡಿದ ಸಂಜಯ್ ಪಾಪದವನು ಎಂದ ತಾಯಿ

Kolkota crime

Krishnaveni K

ಕೋಲ್ಕೊತ್ತಾ , ಮಂಗಳವಾರ, 13 ಆಗಸ್ಟ್ 2024 (11:57 IST)
Photo Credit: Facebook
ಕೋಲ್ಕೊತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ರೇಪ್ ಮಾಡಿ ಕ್ರೂರವಾಗಿ ಹತ್ಯೆ ಮಾಡಿರುವ ಆರೋಪಿ ಸಂಜಯ್ ರಾಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಹಿನ್ನಲೆ ಭಯಾನಕವಾಗಿದೆ. ಆದರೆ ತಾಯಿ ಮಾತ್ರ ನನ್ನ ಮಗ ಪಾಪದವನು ಎಂದು ಹೇಳಿಕೊಂಡಿದ್ದಾರೆ.

ಕೋಲ್ಕೊತ್ತಾ ವೈದ್ಯೆಯನ್ನು ಕ್ರೂರವಾಗಿ ಅತ್ಯಾಚಾರ, ಕೊಲೆ ಎಸಗಿರುವ ಆರೋಪಿ ಹಿನ್ನಲೆಯೇ ಭಯಾನಕವಾಗಿದೆ. ಆರೋಪಿ ಸಂಜಯ್ ರಾಯ್ ಎಂಬಾತ ತರಬೇತಿ ಪಡೆದ ಬಾಕ್ಸರ್ ಆಗಿದ್ದ. ಈತನನ್ನು ಆರ್ ಜಿ ಕರ್ ಆಸ್ಪತ್ರೆಯ ಹೊರಾವರಣದ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಆತನನ್ನು ನಿಯೋಜಿಸಲಾಗುತ್ತಿತ್ತು.

ಹೆಣ್ಣು ಬಾಕನಾಗಿದ್ದ ಈತ ನಾಲ್ಕು ಬಾರಿ ಮದುವೆಯಾಗಿದ್ದ. ಅಶ್ಲೀಲ ವಿಡಿಯೋ, ಪೋರ್ನ್ ಸಿನಿಮಾಗಳು, ಹಾರರ್ ಅಶ್ಲೀಲ ವಿಡಿಯೋಗಳನ್ನು ನೋಡುವ ಚಾಳಿ ಈತನಿಗಿತ್ತು. ಇಂತಹ ವಿಡಿಯೋ ನೋಡಿ ಪ್ರೇರೇಪಣೆಗೊಂಡೇ ಈತ ವೈದ್ಯೆಯ ಮೇಲೆ ಪ್ರಯೋಗ ಮಾಡಲು ಈ ಮಟ್ಟಿಗೆ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ.

ಆದರೆ ಮಗ ಎಂತಹವನೇ ಆದರೂ ತಾಯಿಗೆ ಮಗ ಯಾವತ್ತೂ ಮುದ್ದು ಎನ್ನುವುದಕ್ಕೆ ಈತನ ಪ್ರಕರಣವೂ ಸಾಕ್ಷಿ. ಮಗನ ಮೇಲೆ ಇಷ್ಟೊಂದು ಕ್ರೌರ್ಯ ಮೆರೆದ ಅಪವಾದವಿದ್ದರೂ  ನನ್ನ ಮಗನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನನ್ನ ಮಗನನ್ನು ಪೊಲೀಸರು ಸಿಲುಕಿಸಿದ್ದಾರೆ ಎಂದು ತಾಯಿ ಹೇಳಿಕೊಂಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಂಗಭದ್ರಾ ಜಲಾಶಯಕ್ಕೆ ಇಂದು ತಾತ್ಕಾಲಿಕ ಗೇಟ್